ಚಕ್ರವರ್ತಿ ಹೊಸಂಗಡಿಯಿಂದ ಹೃದಯ ಚಿಕಿತ್ಸಾ ಶಿಬಿರ

ಹೊಸಂಗಡಿ: ಚಕ್ರವರ್ತಿ ಹೊಸಂಗಡಿ ಇದರ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಹಕಾರ ನೀಡಿದೆ. ಹರೀಶ್ ಮಾಡ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಶಿವಪ್ರಸಾದ್ ತಲಪ್ಪಾಡಿ ಅಧ್ಯಕ್ಷತೆ ವಹಿಸಿದರು. ಡಾ| ಮುಕುಂದ, ಡಾ| ಅಮಿತ್ ಕಿರಣ್, ಡಾ| ವಿಜಯ ರೇವಣ್ಕರ್ ಚಿಕಿತ್ಸೆಗೆ ನೇತೃತ್ವ ನೀಡಿದರು. ಜಿಆರ್‌ಬಿ ರಾಮಪ್ಪ, ಕರುಣಾಕರ ಮಂಜೇಶ್ವರ ಶುಭ ಕೋರಿದರು. ಎ.ಎಸ್. ಯಾದವ್, ಮೋತಿ ಕಿರಣ್, ಸುರೇಶ್ ಪರಂಕಿಲ ಉಪಸ್ಥಿತರಿದ್ದರು. ಸುರೇಶ್ ಗಣಿಂಜಾಲ್ ಸ್ವಾಗತಿಸಿ, ದಿನಕರ್ ಬಿ. ನಿರೂಪಿಸಿದರು.

You cannot copy contents of this page