ಚಪ್ಪಲಿ ರಿಪೇರಿ ಕಾರ್ಮಿಕ ನಿಧನ
ಕಾಸರಗೋಡು: ಚಪ್ಪಲಿ ರಿಪೇರಿ ಕಾರ್ಮಿಕ ಅ ಸೌಖ್ಯ ಬಾಧಿಸಿ ಮೃತಪಟ್ಟರು. ಕೂಡ್ಲು ಪಚ್ಚಕ್ಕಾಡ್ ನಿವಾಸಿ ದಿ| ಸಣ್ಣಪ್ಪು-ಕಮಲ ದಂಪತಿಯ ಪುತ್ರ ಕೃಷ್ಣ ಕೆ (30) ಮೃತಪಟ್ಟ ವ್ಯಕ್ತಿ. ಇವರು ಕಾಸರಗೋಡು ನಗರದ ಹಳೆ ಬಸ್ ನಿಲ್ದಾಣದಲ್ಲಿ ಚಪ್ಪಲಿ ರಿಪೇರಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿದ್ದ ಇವರನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಇಂದು ಮುಂಜಾನೆ ವೇಳೆ ನಿಧನ ಸಂಭವಿಸಿದೆ. ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.