ಚಮಚ ನುಂಗಿದ ಯುವತಿ
ಕಲ್ಲಿಕೋಟೆ: ಮಾನಸಿಕ ಸವಾಲು ಎದುರಿಸುತ್ತಿದ್ದ ಯುವತಿ ಚಮಚವನ್ನು ನುಂಗಿದ ಘಟನೆ ನಡೆದಿದೆ. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆದರೂ ಯುವತಿ ಈಗಲೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಲ ಪ್ಪುರಂ ನಿವಾಸಿಯಾದ ೩೩ರ ಹರೆ ಯದ ಯುವತಿ ಚಮಚ ನುಂಗಿದ್ದಾರೆ. ಎದೆನೋವಿನ ಹಿನ್ನೆಲೆಯಲ್ಲಿ ಯುವತಿ ಯನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು. ಖಾಸಗಿ ಆಸ್ಪತ್ರೆಯಿಂದ ನಿನ್ನೆ ಮುಂಜಾನೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಅಲ್ಲಿ ನಡೆಸಿದ ಎಕ್ಸ್ರೇ ತಪಾಸಣೆಯಲ್ಲಿ ಎದೆಯಲ್ಲಿ ಚಮಚ ಸಿಲುಕಿಕೊಂಡಿ ರುವುದು ಕಂಡುಬಂ ದಿದೆ. ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಚಮಚವನ್ನು ಹೊರತೆಗೆಯಲಾಯಿತು.