ಚಾಕು ತೋರಿಸಿ ದೌರ್ಜನ್ಯಕ್ಕೆ ಯತ್ನಿಸಿದ ಅಧ್ಯಾಪಕನಿಗೆ ಇರಿದ ವಿದ್ಯಾರ್ಥಿನಿ

ಚೆನ್ನೈ: ಚಾಕು ತೋರಿಸಿ ಬೆದರಿಕೆಯೊಡ್ಡಿ ದೌರ್ಜನ್ಯ ಗೈಯ್ಯಲು ಯತ್ನಿಸಿದ ಅಧ್ಯಾಪಕನನ್ನು ವಿದ್ಯಾರ್ಥಿನಿ ಅದೇ ಚಾಕು ಕಸಿದು ಇರಿದ ಘಟನೆ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅಧ್ಯಾಪಕ ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೇಲಂ ಬಳಿ ಈ ಘಟನೆ ನಡೆದಿದೆ. ಧರ್ಮಪುರಿ ಅಳಗಿರಿನಗರ ನಿವಾಸಿಯಾದ ಶಕ್ತಿದಾಸ್ ಎಂಬಾತನಿಗೆ ಇರಿತವುಂಟಾಗಿದೆ.  ಹಾಸ್ಟೆಲ್‌ನಲ್ಲಿ ನಿಂತು ಕಲಿಯು ತ್ತಿರುವ ವಿದ್ಯಾರ್ಥಿನಿ ಪುಸ್ತಕ ಪಡೆಯಲೆಂದು ಅಧ್ಯಾಪಕನ ಬಳಿಗೆ ಹೋದಾಗ ಆತ ಚಾಕು ತೋರಿಸಿ ಬೆದರಿಕೆಯೊಡ್ಡಿ ದೌರ್ಜನ್ಯಕ್ಕೆ ಮುಂದಾಗಿದ್ದಾನೆನ್ನಲಾಗಿದೆ. ಬೆದರಿಕೆಗೆ ಹೆದರದ ವಿದ್ಯಾರ್ಥಿನಿ ಶಕ್ತಿದಾಸ್‌ನ ಕೈಯಿಂದ ಚಾಕು ಕಸಿದು ಆತನ ಹೊಟ್ಟೆಗೆ ಇರಿದಿದ್ದಾಳೆ.  ಶಬ್ದ ಕೇಳಿ ಹಾಸ್ಟೆಲ್‌ನ ನೌಕರರು ತಲುಪಿದಾಗ ಶಕ್ತಿದಾಸ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.  ಘಟನೆ ಬಗ್ಗೆ  ಸೇಲಂ ಅಳಕಾಪುರಂ ಪೊಲೀಸರು ಕೇಸು ದಾಖಲಿಕೊಂಡಿದ್ದಾರೆ.

RELATED NEWS

You cannot copy contents of this page