ಚಿಕಿತ್ಸೆಯಲ್ಲಿದ್ದ ಪುತ್ರ ಸಾವಿನ ಆಘಾತದಿಂದ ತಾಯಿ ಕುಸಿದು ಬಿದ್ದು ಮೃತ್ಯು
ಕಾಸರಗೋಡು: ಅಸೌಖ್ಯ ದಿಂದ ಚಿಕಿತ್ಸೆಯಲ್ಲಿದ್ದ ಪುತ್ರನ ಸಾವಿನ ವಿಷಯ ತಿಳಿದ ತಾಯಿಯೂ ಆಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಕಾಸರಗೋಡು ನಗರದ ಕೊರಕ್ಕೋಡು ನಾಗರಕಟ್ಟೆ ನಿವಾಸಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಯ ಆಫೀಸ್ ಅಸಿಸ್ಟೆಂಟ್ ಸಿಬ್ಬಂದಿ ಮಂಜುನಾಥ (೩೬) ಎಂಬವರನ್ನು ಅಸೌಖ್ಯದ ನಿಮಿತ್ತ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಆ ವಿಷಯ ತಿಳಿದ ಅವರ ತಾಯಿ ಸುಂದರಿ (೫೬) ತೀವ್ರ ಮಾನಸಿಕ ಆಘಾತಕ್ಕೊಳಗಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೂ, ಫಲಕಾರಿಯಾಗದೆ ಅವರೂ ಸಾವನ್ನಪ್ಪಿದರು. ದಿ| ಸಂಜೀವರ ಪುತ್ರನಾಗಿರುವ ಮೃತ ಮಂಜುನಾಥ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಮತ್ತು ಪುತ್ರನ ಸಾವು ಇಡೀ ನಾಡನ್ನು ಶೋಕಸಾಗರದಲ್ಲಿ ಮುಳುಗಿಸುವಂತೆ ಮಾಡಿದೆ.