ಚಿನ್ನದೊಡವೆ ದರೋಡೆಗೈದ ಪ್ರಕರಣ: ಕುಖ್ಯಾತ ಆರೋಪಿಗೆ ೭ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಗೃಹಿಣಿಯ ತಲೆಗೆ ಹೊಡೆದು ಪ್ರಜ್ಞಾಹೀನಗೊಳಿಸಿದ ಬಳಿಕ ಆಕೆಯ ದೇಹದಲ್ಲಿದ್ದ ಚಿನ್ನದೊಡವೆಗ ನ್ನು ದರೋಡೆಗೈದ ಪ್ರಕರಣದ ಕುಖ್ಯಾತ ಆರೋಪಿಗೆ ಹೊಸದುರ್ಗ ಅಸಿಸ್ಟೆಂಟ್ ಸೆಶನ್ಸ್ ನ್ಯಾಯಾಲಯ ೭ ವರ್ಷ ಸಜೆ ಮತ್ತು ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಮಡಿಕೈಯ ಕರುಕ್ಕವಳಪ್ಪಿನ್  ಅಶೋಕನ್ (೪೫) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ೨೦೨೨ ಮಾರ್ಚ್ ೯ರಂದು ಹಾಡಹಗಲೇ ಹೊಸದುರ್ಗ ಕಾಞರಪೊಯಿಲಿನ ಅನಿಲ್ ಕುಮಾರ್ ಎಂಬವರ ಮನೆಗೆ ನುಗ್ಗಿ ಅವರ ಪತ್ನಿ ಬಿಜಿತರ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ, ಅವರ ದೇಹದಲ್ಲಿದ್ದ ಚಿನ್ನದೊಡವೆ ದರೋಡೆಗೈದ ಪ್ರಕರಣದಲ್ಲಿ ಆರೋಪಿ ಅಶೋಕನ್‌ಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

Leave a Reply

Your email address will not be published. Required fields are marked *

You cannot copy content of this page