ಚಿನ್ನದ ದರ ಏರಿಕೆ ಮುಂದುವರಿಕೆ ಇಂದು 960 ರೂ.ಗಳ ಹೆಚ್ಚಳ
ಕಾಸರಗೋಡು: ಚಿನ್ನದ ದರದಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ. ಇಂದು ಮಾತ್ರ 960 ರೂ.ಗಳ ಏರಿಕೆಯಾಗಿದ್ದು, ಈ ಮೂಲಕ ಒಂದು ಪವನ್ಗೆ 61,840 ರೂ.ಗೆ ತಲುಪಿದೆ. ಇಂದು ಒಂದು ಗ್ರಾಂ ಚಿನ್ನದ ದರ 7730 ರೂ. ಆಗಿದೆ. ನಿನ್ನೆ ಇದು 7610 ರೂ. ಆಗಿತ್ತು. ಬುಧವಾರ ಗ್ರಾಂಗೆ 7,595 ರೂ., ಪವನ್ಗೆ 60,760 ರೂ. ಆಗಿತ್ತು. ಕೇಂದ್ರ ಮುಂಗಡಪತ್ರ ನಾಳೆ ಸಂಸತ್ನಲ್ಲಿ ಮಂಡನೆಯಾಗಲಿರು ವಂತೆಯೇ ಚಿನ್ನದ ದರ ಸಾರ್ವತ್ರಿಕ ದಾಖಲೆಗೇರಿದೆ. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಉಂಟಾದ ಬೆಲೆಯೇರಿಕೆ ರಾಜ್ಯದಲ್ಲಿ ಬೆಲೆಯೇರಿಕೆಯಾಗಲು ಕಾರಣವೆಂದು ಹೇಳಲಾಗುತ್ತಿದೆ. ಮೆಕ್ಸಿಕೋ, ಚೀನಾ, ಕೆನಡಾ ಸಹಿತ ವಿವಿಧ ದೇಶಗಳ ಮೇಲೆ ಹೆಚ್ಚಿನ ಆಮದು ಸುಂಕ ಹೇರಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿರುವುದು ಕೂಡಾ ಬೆಲೆಯೇರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.