ಚುನಾವಣಾ ನೀತಿಸಂಹಿತೆ ಉಲ್ಲಂಘನೆ: ಜಿಲ್ಲೆಯಲ್ಲಿ ಇದುವರೆಗೆ 17 ದೂರುಗಳು

ಕಾಸರಗೋಡು: ಲೋಕಸಭೆ ಚುನಾವಣೆಗೆ ಸಂಬAಧಿಸಿದ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬAಧಿಸಿದ ದೂರುಗಳು ಮತ್ತು ಅಕ್ರಮಗಳ ಬಗ್ಗೆ ವರದಿ ಮಾಡಲು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮೊಬೈಲ್ ಸಿವಿಜಿಲ್ ಆ್ಯಪ್ ಮೂಲಕ ಜಿಲ್ಲೆಯಲ್ಲಿ 17 ದೂರುಗಳು ಬಂದಿವೆ. ಇವುಗಳಲ್ಲಿ 15 ದೂರುಗಳಿಗೆ ಕ್ರಮ ಕೈಗೊಳ್ಳಲಾಗಿದೆ.
ಅಪೂರ್ಣವಾಗಿದ್ದ ಎರಡು ದೂರುಗಳನ್ನು ಉಪೇಕ್ಷಿಸಲಾಗಿದೆ. ತ್ರಿಕ್ಕರಿಪುರ ಕ್ಷೇತ್ರದಿಂದ ಒಂಭತ್ತು ದೂರುಗಳು ಬಂದಿವೆ. ಕಾಸರಗೋಡು ಕ್ಷೇತ್ರದಿಂದ ನಾಲ್ಕು, ಉದುಮ ಮತ್ತು ಕಾಞಂಗಾಡು ಕ್ಷೇತ್ರದಿಂದ ತಲಾ ಒಂದು ದೂರುಗಳು ಬಂದಿವೆ. ಮಂಜೇಶ್ವರದಿAದ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ. ಮಾರ್ಚ್ 16 ಸಂಜೆ ಚುನಾವಣಾ ಅಧಿಸೂಚನೆ ಬಂದ ನಂತರ ಜಿಲ್ಲೆಯಲ್ಲಿ ಸಿ ವಿಜಿಲ್ ಆ್ಯಪ್ ಕಾರ್ಯಾರಂಭ ಮಾಡಿದೆ.
ಸರಕಾರದ ಅಧೀನದಲ್ಲಿರುವ ಪ್ರದೇಶದಲ್ಲಿ ಅನಧಿಕೃತವಾಗಿ ಗೋಡೆ ಬರಹ, ಪ್ರಚಾರದ ಪೋಸ್ಟರ್, ಫ್ಲಕ್ಸ್ ಗಳನ್ನು ಅಂಟಿಸುವುದರ ವಿರುದ್ಧವಾದ ದೂರುಗಳು ಇದುವರೆಗೆ ಬಂದಿವೆÀ. ಎಂದು ಜಿಲ್ಲಾ ನಿಯಂತ್ರಣ ಘಟಕ (ಕಂಟ್ರೋಲ್ ರೂಂ) ನೋಡಲ್ ಅಧಿಕಾರಿ ಕೆ.ವಿ.ಶ್ರುತಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬAಧಿಸಿ ನೀತಿ ಸಂಹಿತೆ ಉಲ್ಲಂಘನೆಗೆ ದೂರುಗಳು ಮತ್ತು ಅಕ್ರಮಗಳ ಬಗ್ಗೆ ಸಾರ್ವಜನಿಕರು ಸಿ ವಿಜಿಲ್ ಆ್ಯಪ್ ಮೂಲಕ ವರದಿ ಮಾಡಬಹುದು. ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಇರುವ ಕಾರ್ಯವಿಧಾನವಾಗಿದೆ. ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಜಿಪಿಎಸ್ ಸೌಲಭ್ಯವಿರುವ ಯಾವುದೇ ಸ್ಮಾರ್ಟ್ ಫೋನಿನಲ್ಲಿ ಸಿ-ವಿಜಿಲ್ ಆ್ಯಪ್‌ನ್ನು ಸ್ಥಾಪಿಸಬಹುದು. ಈ ಆ್ಯಪ್‌ನ ಮೂಲಕ ಲಭಿಸಿದ ದೂರುಗಳಿಗೆ 100 ನಿಮಿಷಗಳೊಳಗೆ ಕ್ರಮ ಕೈಗೊಂಡು ಪರಿಹಾರ ಪಡೆಯುವ ವ್ಯವಸ್ಥೆ ಇದೆ. ನೀತಿ ಸಂಹಿತೆಯ ಉಲ್ಲಂಘನೆಗೆ ಅಥವಾ ವೆಚ್ಚ ನಿಯಮಗಳ ಉಲ್ಲಂಘನೆಗೆ ಸಂಬAಧಿಸಿದ ವಿಷಯಗಳನ್ನು ಗಮನಿಸಿದರೆ ದೂರುದಾತರು ಅಪ್ಲಿಕೇಶನ್ ಮೂಲಕ ಚಿತ್ರ ಅಥವಾ ವೀಡಿಯೊ ತೆಗೆದುಕೊಂಡು ದೂರನ್ನು ದಾಖಲಿಸಬಹುದು. ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಕ್ಷೇತ್ರ ಘಟಕಕ್ಕೆ ದೂರುಗಳನ್ನು ರವಾನಿಸಲಾಗುವುದು. ಬಳಿಕ ಸ್ಕ್ವಾಡ್ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳುತ್ತಾರೆ ಯಾವ ಸ್ಥಳದಿಂದ ಫೋಟೋ/ವೀಡಿಯೊ ತೆಗೆಯಲಾಗಿದೆ ಎಂಬ ಮಾಹಿತಿಯನ್ನು ಈ ಆ್ಯಪ್ ಗುರುತಿಸಿ ರೆಕಾರ್ಡ್ ಮಾಡುತ್ತದೆ, ಆದ್ದರಿಂದ ಸ್ಕಾಡ್ ತಂಡಕ್ಕೆ ಡಿಜಿಟಲ್ ಪುರಾವೆಯ ಆಧಾರದಲ್ಲಿ ಸಕಾಲಿಕವಾಗಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಫೋನ್ ಸಂಖ್ಯೆ, ಒಟಿಪಿ ಮತ್ತು ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ದೂರು ಸಲ್ಲಿಸಿದ ವ್ಯಕ್ತಿಗೆ ಮುಂದಿನ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಐ ಡಿ ಲಭಿಸುತ್ತದೆ. ಅನಾಮಧೇಯವಾಗಿ ದೂರು ಸಲ್ಲಿಸುವ ಸೌಲಭ್ಯವೂ ಈ ಆ್ಯಪ್‌ನಲ್ಲಿ ಇದೆ. ಈ ರೀತಿಯಾಗಿ ದೂರು ನೀಡಿದವರಿಗೆ ದೂರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಿರಂತರವಾಗಿ ಒಂದೇ ಸ್ಥಳದಿಂದ ಒಂದೇ ರೀತಿಯ ದೂರುಗಳು ದಾಖಲಿಸುವುದನ್ನು ತಪ್ಪಿಸುವ ಕಾರ್ಯವಿಧಾನವೂ ಇದೆ. ಜಿಲ್ಲಾ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗದ ಮಾಹಿತಿಗಳನ್ನು ಮುಂದಿನ ಕ್ರಮಕೈಗೊಳ್ಳುವುದಕ್ಕಾಗಿ ಕೇಂದ್ರ ಚುನಾವಣಾ ಆಯೋಗದ ರಾಷ್ಟ್ರೀಯ ಗ್ರಿವೆನ್ಸ್ ಪೋರ್ಟಲ್‌ಗೆ ಕಳುಹಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page