ಚುನಾವಣಾ ಪ್ರಚಾರ ಬೋರ್ಡ್‌ಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ದೇಶ: ರಾಜಕೀಯ ಪಕ್ಷಗಳಿಂದ ಸಿದ್ಧತೆ

ಕಾಸರಗೋಡು:  ಮಳೆಗಾಲ ತಲುಪುವ ಮುಂಚಿತವಾಗಿ ಶೀಘ್ರವೇ ಚುನಾವಣಾ ಪ್ರಚಾರ ಬೋರ್ಡ್‌ಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶ ನೀಡಿದ ಹಿನ್ನೆಲೆಯಲ್ಲಿ  ರಸ್ತೆ ಬದಿಯಲ್ಲಿ ಸ್ಥಾಪಿಸಿದ ಪ್ರಚಾರ ಬೋರ್ಡ್‌ಗಳನ್ನು ತೆರವುಗೊಳಿಸುವ ಕ್ರಮಗಳಿಗೆ ರಾಜಕೀಯ ಪಕ್ಷಗಳು ಮುಂದಾಗಿವೆ. ತೆರವುಗೊಳಿಸದಿದ್ದರೆ ಸಂಬಂಧಪಟ್ಟ ರಾಜಕೀಯ ಪಕ್ಷದ ನೇತೃತ್ವಕ್ಕೆ ದಂಡ ಹೇರಲಾಗುವುದು. ಈ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಜಾಗ್ರತೆ ವಹಿಸಲು ಕಾರ್ಯಕರ್ತರಿಗೆ ಮುಖಂಡರು ಸೂಚಿಸಿದ್ದಾರೆನ್ನಲಾಗಿದೆ. ಚುನಾವಣೆ ಅಗತ್ಯ ಸಹಿತ ರಸ್ತೆ ಬದಿಯಲ್ಲಿ ಸ್ಥಾಪಿಸಿದ ಸಣ್ಣ ಹಾಗೂ ದೊಡ್ಡದಾದ ಬೋರ್ಡ್‌ಗಳು, ಕಂಬಗಳು ಮೊದ ಲಾದವುಗಳನ್ನು ಕೂಡಲೇ ತೆರ ವುಗೊಳಿಸಬೇಕೆಂದು ಜಿಲ್ಲೆಯ ಎಲ್ಲಾ  ರಾಜಕೀಯ ಪಕ್ಷಗಳಿಗೂ ಜಿಲ್ಲಾಡಳಿತ ನಿರ್ದೇಶ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದವುಗಳಲ್ಲಿ ಕೆಲವನ್ನು ಈ ಮೊದಲೇ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅನಧಿಕೃತವಾಗಿ ಸ್ಥಾಪಿಸಿದವುಗಳಲ್ಲಿ ಉಳಿದವುಗಳನ್ನು ತೆರವುಗೊಳಿಸದಿದ್ದರೆ ಸಂಬಂಧಪಟ್ಟವರಿಗೆ ಸೂಚನೆ  ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಮಾಹಿತಿ ನೀಡಿಯೂ ತೆರವುಗೊಳಿಸದವುಗಳನ್ನು ಅಧಿಕಾರಿಗಳೇ ತೆರವುಗೊಳಿಸಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ೬೦ ಶೇಕಡಾದಷ್ಟು ಈ ರೀತಿಯಲ್ಲಿ ಪ್ರಚಾರ ಬೋರ್ಡ್‌ಗಳನ್ನು  ಬದಲಿಸಲಾಗಿದೆಯೆಂದು ಹಸಿರು ಕ್ರಿಯಾ ಸೇನೆ ಅಧಿಕಾರಿಗಳಿಗೆ ತಿಳಿಸಿದೆ. ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಆಯಾ ರಾಜಕೀಯ ಪಕ್ಷಗಳೇ ತೆರವುಗೊಳಿಸುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಕ್ರಮ ಆರಂಭಿಸಿವೆ. ಗಾಳಿ ಮಳೆಗೆ ಬೋರ್ಡ್‌ಗಳು ಕೆಳಗೆ ಬಿದ್ದು ಅಪಾಯ ಉಂಟಾಗುವ ಸಾಧ್ಯತೆ, ವಾಹನ ಸಂಚಾರ ತಡೆ ಉಂಟಾಗಲು  ಸಾಧ್ಯತೆ ಇದೆ. ಕಾಸರಗೋಡು ನಗರಸಭಾ ಅಧಿಕಾರಿಗಳು ಮಾನದಂಡ ಉಲ್ಲಂಘಿಸಿ ಬೋರ್ಡ್‌ಗಳನ್ನು ಸ್ಥಾಪಿಸಿದವರಿಗೆ ನೋಟೀಸು ನೀಡಿರುವುದಾಗಿಯೂ, ತೆರವುಗೊಳಿಸದಿದ್ದರೆ ದಂಡ ಹಾಗೂ ವೆಚ್ಚ ವಸೂಲಿ ಮಾಡಿ ಅಧಿಕಾರಿಗಳೇ ತೆರವುಗೊಳಿಸುವರೆಂದು ನಗರಸಭಾ ಕಾರ್ಯದರ್ಶಿ ತಿಳಿಸಿದ್ದಾರೆ. ಈ ಮಧ್ಯೆ ಹಲವು ಪಂಚಾಯತ್‌ಗಳಲ್ಲೂ ಇದನ್ನು ಪರಿಶೀಲಿಸಲು, ತೆರವುಗೊ ಳಿಸಲು ಅಗತ್ಯದ ನೌಕರರಿಲ್ಲದಿರು ವುದು ಸರಕಾರಿ ನಿರ್ದೇಶವನ್ನು ಸೂಕ್ತ ಸಮಯದಲ್ಲಿ ಪಾಲಿಸುವುದಕ್ಕೆ ತಡೆಯಾಗುತ್ತಿದೆಯೆಂದು ದೂರಲಾಗುತ್ತಿದೆ.

ಕಾಸರಗೋಡು ತಾಲೂಕಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬೋರ್ಡ್ ಸಹಿತ ತೆರವುಗೊಳಿಸಲಾ ಗಿದೆಯೆಂದು ತಹಶೀಲ್ದಾರರು ತಿಳಿಸಿದ್ದಾರೆ. ಆದರೆ ಖಾಸಗಿ ಹಿತ್ತಿಲಲ್ಲಿ, ಮನೆ ಹಿತ್ತಿಲಲ್ಲಿ ಸ್ಥಾಪಿಸಿದವುಗಳನ್ನು ತೆರವುಗೊಳಿಸಲಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page