ಚುನಾವಣಾ ಪ್ರಶಸ್ತಿ: ಎಕೆಪಿಎಯಿಂದ ಜಿಲ್ಲಾಧಿಕಾರಿಗೆ ಅಭಿನಂದನೆ
ಕಾಸರಗೋಡು: ಕಳೆದ ಚುನಾವಣೆ ಸಂದರ್ಭದಲ್ಲಿ ಉತ್ತಮ ಚಟುವಟಿಕೆ ನಡೆಸಿದ ವ್ಯಕ್ತಿಗೆ ಪ್ರಧಾನ ಚುನಾವ ಣಾಧಿಕಾರಿ ಏರ್ಪಡಿಸಿದ ಬಹುಮಾನಕ್ಕೆ ಅರ್ಹವಾದ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಭಶೇಖರ್‌ರನ್ನು ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ಆಶ್ರಯದಲ್ಲಿ ಅಭಿನಂದಿಸಲಾಯಿತು. ಘಟಕ ಅಧ್ಯಕ್ಷ ಅಜಿತ್, ಕಾರ್ಯದರ್ಶಿ ಸುಜಿತ್, ಜಿಲ್ಲಾಧ್ಯಕ್ಷ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಬಿ.ಜೆ, ವಲಯ ಅಧ್ಯಕ್ಷ ಸನ್ನಿ ಜೇಕಬ್, ಯೂನಿಟ್ ಕೋಶಾಧಿಕಾರಿ ಮನೀಶ್, ಉಪಾಧ್ಯಕ್ಷ ಅಖಿಲ್, ಪಿ.ಆರ್.ಒ. ಶ್ರೀಕಾಂತ್ ಭಾಗವಹಿಸಿದರು.