ಚುನಾವಣೆಯಲ್ಲಿ ಮಾಧ್ಯಮದ ಪಾತ್ರ ನಿರ್ಣಾಯಕ-ಜಿಲ್ಲಾಧಿಕಾರಿ

ಕಾಸರಗೋಡು: ಸಾರ್ವತ್ರಿಕ ಚುನಾ ವಣೆಯ ಸುಗಮ ಕಾರ್ಯಾಚರಣೆಗಾಗಿ, ಚುನಾವಣೆಯ ಮಹತ್ವದ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ ಯೆಂದು ಜಿಲ್ಲಾಧಿಕಾರಿ ಕೆ. ಇಂಬ ಶೇಖರ್ ನುಡಿದರು. ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಸಭಾಂ ಗಣದಲ್ಲಿ ಚುನಾವಣೆಯಲ್ಲಿ ಮಾಧ್ಯಮ ಗಳ ಪಾತ್ರ ಎಂಬ ವಿಷಯದ ಕುರಿತು ಆಯೋಜಿಸಿದ ತರಬೇತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು.  ನೀತಿ ಸಂಹಿತೆ ಉಲ್ಲಂಘನೆಯಾ ದರೆ ಕೂಡಲೇ ವರದಿ ನೀಡಬೇಕು. ಮತದಾನ ಪೂರ್ಣಗೊಳ್ಳುವ ಮೊದಲು ಎಕ್ಸಿಟ್ ಪೂಲ್ ಫಲಿತಾಂಶವನ್ನು ಪ್ರಕಟಿಸಬಾರದು. ಸುದ್ದಿ ಪ್ರಕಟಿಸುವಾಗ ಸತ್ಯಾಂಶ ಖಚಿತಪಡಿಸಿಕೊಳ್ಳಬೇಕು ಎಂದು ಅವರು ನುಡಿದರು.  ಸಾಮಾಜಿಕ ಮಾಧ್ಯಮ ಎಂಬ ವಿಷಯದಲ್ಲಿ ಸ್ಟೇಟ್ ಮಾಸ್ಟರ್ ಟ್ರೈನರ್ ಬಿ.ಎನ್. ಸುರೇಶ್, ಮೀಡಿಯ ಸರ್ಟಿಫಿಕೇಶನ್ ಆಂಡ್ ಮೋನಿಟರಿ ಸಮಿತಿ ಎಂಬ ವಿಷಯದಲ್ಲಿ ಸಜಿತ್ ಪಾಲೇರಿ ತರಗತಿ ನಡೆಸಿದರು. ನೋಡೆಲ್ ಅಫೀಸರ್ ಸೂಫಿಯಾನ್ ಅಹಮ್ಮದ್, ಕೆ. ಬಾಲಕೃಷ್ಣನ್, ಎಂ. ಮಧುಸೂದನನ್, ಕೆ. ಮುಹಮ್ಮದ್ ಕುಂಞಿ, ಪ್ರೊ. ಕೆ. ಗೋಪಿನಾಥ್ ಮಾತನಾಡಿದರು. ಜಿಲ್ಲೆಯ ಪತ್ರಕರ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page