ಚುನಾವಣೆಯ ಕರಡು ಮತದಾರರ ಪಟ್ಟಿ ಕನ್ನಡದಲ್ಲಿ ವಿತರಿಸಲು ಒತ್ತಾಯ
ಮಂಜೇಶ್ವರ: ೨೦೨೪ರ ಲೋಕಸಭಾ ಚುನಾವಣೆಯ ಕರಡು ಮತದಾರರ ಪಟ್ಟಿ ಈಗಾಗಲೇ ನೀಡಲಾಗಿದೆ. ಈ ಹಿಂದಿನ ಚುನಾವಣೆ ವೇಳೆ ಮಲಯಾಳ ಹಾಗೂ ಕನ್ನಡ ಭಾಷೆಯ ಕರಡು ಪಟ್ಟಿ ಲಭಿಸಿದ್ದರೂ ಈ ಭಾರಿಯ ಕನ್ನಡ ಕರಡು ಪಟ್ಟಿ ವಿಳಂಬಗೊAಡಿರುವುದು ಯಾಕೆÀ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಈಗ ಮಲಯಾಳ ಭಾಷೆಯಲ್ಲಿರುವ ಮತದಾರರ ಪಟ್ಟಿ ಮಾತ್ರ ಲಭಿಸಿದೆ. ಭಾಷಾ ಅಲ್ಪ ಸಂಖ್ಯಾತರಾದ ಮಂಜೇಶ್ವರಕ್ಕೆ ಕನ್ನಡ ಮತದಾರ ಪಟ್ಟಿಯು ಅತಿ ಅಗತ್ಯವಾಗಿದೆ. ನ.೪ರಂದು ನಡೆದ ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಅವರ ಗಮನಕ್ಕೂ ಹಾಗೂ ಸಂಸದರಾದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿಗಳ ಗಮನಕ್ಕೂ ಹಲವು ಬಾರಿ ತಂದರು ಕೂಡ ಈವರೆಗೆ ಯಾವುದೇ ಕ್ರಮಗೊಂಡಿಲ್ಲ, ತಹಶೀಲ್ದಾರ್ ಅವರನ್ನು ದಿನನಿತ್ಯ ಸಂಪರ್ಕಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ ತಿಳಿಸಿದ್ದಾರೆ. ಕನ್ನಡ ಮತದಾರ ಪಟ್ಟಿಯನ್ನು ಅತಿ ಶೀಘ್ರದಲ್ಲಿ ಲಭಿಸುವಂತೆ ಮಾಡಬೇ ಔ್ರಒ¥್ಣ್ನ @È್ಣÁ್ಣ್ನ ಒತ್ತಾಯಿಸಿದ್ದಾರೆ.