ಚೆನ್ನೈಯಲ್ಲಿ ಬೆಂಕಿ ಆಕಸ್ಮಿಕ: ಇಬ್ಬರು ಯುವತಿಯರು ಮೃತ್ಯು

ಚೆನ್ನೈ: ಹಾಸ್ಟೆಲ್‌ನಲ್ಲಿ ಉಂಟಾದ ಬೆಂಕಿ ಆಕಸ್ಮಿಕದಲ್ಲಿ ಇಬ್ಬರು ಯುವತಿಯರು ಸಾವಿಗೀಡಾದರು. ಗಾಯಗೊಂಡ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧುರೈಯ ಕತ್ರಪಾಳಯದಲ್ಲಿ ಕಾರ್ಯಾಚರಿಸುತ್ತಿದ್ದ ವಿಶಾಖ ವನಿತಾ ಹಾಸ್ಟೆಲ್‌ನ ಫ್ರಿಡ್ಜ್ ಸ್ಫೋಟಗೊಂಡ ಬೆಂಕಿ ಸೃಷ್ಟಿಯಾಗಿತ್ತು. ಇಂದು ಮುಂಜಾನೆ 3 ಗಂಟೆಗೆ ಘಟನೆ ಸಂಭವಿಸಿದೆ. ಅಪಾಯದ ಬಗ್ಗೆ ಅರಿತು ತಲುಪಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಶರಣ್ಯ, ಪ್ರಮೀಳ ಚೌದರಿ ಎಂಬಿವರು ಮೃತಪಟ್ಟಿದ್ದಾರೆ. ಇವರಲ್ಲಿ ಓರ್ವೆ ಅಧ್ಯಾಪಿಕೆಯಾಗಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ೪೦ ಮಹಿಳೆಯರು ಈ ಹಾಸ್ಟೆಲ್ ಕೊಠಡಿಯಲ್ಲಿದ್ದರೆನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page