ಚೇರಾಲು ಶ್ರೀ ಶಾರದಾಮಹೋತ್ಸವ ೨೩ರಿಂದ

ಬಾಯಾರು: ಚೇರಾಲು ಶಿವಾಜಿ ನಗರ ಶ್ರೀ ಶಾರದಾ ಭಜನಾ ಮಂದಿರ ದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಈ ತಿಂಗಳ 23,24 ರಂದು ವಿವಿಧ ಕಾರ್ಯಕ್ರಮ ಗಳೊಂ ದಿಗೆ ನಡೆಯಲಿದೆ. 23ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 7ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಪೂಜೆ, 8ರಿಂದ ಸಂಜೆ 6ರ ತನಕ ಭಜನೆ, ಬೆಳಿಗ್ಗೆ 9.30ಕ್ಕೆ ಆಯುಧಪೂಜೆ, ಸಂಜೆ 6ಕ್ಕೆ ಆಶ್ಲೇಷ ಬಲಿ ಆರಂಭ, ಸಂಜೆ 6ಕ್ಕೆ ಮಕ್ಕಳಿಂ ದ ಸಾಂಸ್ಕöÈತಿಕ ಕಾರ್ಯಕ್ರಮ, ರಾತ್ರಿ 7ಕ್ಕೆ ಛದ್ಮವೇಷ, 7.30ರಿಂದ ಯಕ್ಷಗಾನ ಬಯಲಾಟ, 9ಕ್ಕೆ ಆಶ್ಲೇಷ ಬಲಿ ಮಹಾ ಮಂಗಳಾ ರತಿ ನಡೆಯಲಿದೆ. 24ರಂದು ಬೆಳಿಗ್ಗೆ 7ಕ್ಕೆ ಪೂಜೆ, 8.30ಕ್ಕೆ ವಿವಿಧ ಸ್ಪರ್ಧೆ ಗಳು, ಮಧ್ಯಾಹ್ನ 12ಕ್ಕೆ ವಿದ್ಯಾರಂಭ, ಅನ್ನಸಂತರ್ಪಣೆ, ಅಪರಾಹ್ನ 2.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೆ.ಎಂ ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಡಾ.ಪ್ರದೀಪ್ ಆಟಿಕುಕ್ಕೆ ಧಾರ್ಮಿಕ ಉಪನ್ಯಾಸ ನೀಡುವರು. ಸಂಜೆ 4.30ಕ್ಕೆ ಶೋಭಾಯಾತ್ರೆ ನಡೆಯಲಿದೆ.

You cannot copy contents of this page