ಚೇರಾಲ್‌ನಲ್ಲಿ ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ
ಪೈವಳಿಕೆ: ರಾಜಕೀಯ ವಿರೋಧಿಗಳು ಕೂಡ ಮೆಚ್ಚುವ ತತ್ವ ಆದರ್ಶ ಜೀವನ, ಅಧಿಕಾರಕ್ಕಿಂತ ಸಿದ್ಧಾಂತ ಮೇಲು ಎಂದು ದೇಶವನ್ನು ಮುನ್ನಡೆಸಿದ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮ ದಿನಾಚರಣೆ ಚೇವಾರು ಸುಬ್ರಹ್ಮಣ್ಯ ದೇವಾಲಯ ಸಭಾಂಗಣದಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಉದ್ಘಾಟಿಸಿದರು. ಬೂತ್ ಅಧ್ಯಕ್ಷೆ ವಾರಿಜ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಮುಖಂಡರಾದ ವಿಘ್ನೇಶ್ವರ ಕೆದುಕೋಡಿ, ಸದಾಶಿವ ಚೇರಾಲ್, ಯತಿರಾಜ್ ಶೆಟ್ಟಿ, ಲೋಕೇಶ್ ನೋಂಡ, ಗಣೇಶ್ ಪ್ರಸಾದ್ ಚೇರಾಲ್ ಉಪಸ್ಥಿತರಿದ್ದರು. ಇದೇ ವೇಳೆ ಬೂತ್ ಸಮಿತಿ ರಚಿಸಲಾಯಿತು. ಗಿರೀಶ್ ಸಾರ್ಕುತ್ತಿ ಸ್ವಾಗತಿಸಿ ರವೀಂದ್ರ ವಂದಿಸಿದರು.