ಚೇವಾರು ಶಾಲೆಯಲ್ಲಿ ಕಲಿಕೋತ್ಸವ
ಉಪ್ಪಳ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಲಿಕೋತ್ಸವವನ್ನು ಪೈವಳಿಕೆ ಪಂಚಾಯತ್‌ನ ಸದಸೆ್ಯ ರಾಜೀವಿ ಶೆಟ್ಟಿಗಾರ್ ಉದ್ಘಾಟಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಆಸೀಸ್ ಚೇವಾರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಪ್ರಾಸ್ತಾವಿಕ ನುಡಿದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸ್ಮಿತಾ ಶುಭ ಹಾರೈಸಿದರು.ಶಾಲಾ ವ್ಯವಸ್ಥಾಪಕ ಪ್ರತಿನಿಧಿ,ಹೇರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಭಟ್,ಕಲಿಕೋತ್ಸವದ ಮಹತ್ವವನ್ನು ವಿವರಿಸಿದರು.ಹಿರಿಯ ಶಿಕ್ಷಕಿ ರಾಜೇಶ್ವರಿ.ಬಿ ಶುಭಾಶಂಸನೆಗೈದರು. ಶಿಕ್ಷಕರಾದ ರವಿಕುಮಾರ್ ಸ್ವಾಗತಿಸಿ, ಸಾತ್ವಿಕ್ ವಂದಿಸಿದರು.ಶಿಕ್ಷಕ ಪ್ರಸಾದ್ ರೈ ನಿರೂಪಿಸಿದರು.ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಗಳನ್ನು ಪ್ರದರ್ಶಿಸಿದರು.
ಇಂಗ್ಲಿಷ್, ಕನ್ನಡ, ಸಂಸ್ಕೃತ,ಹಿAದಿ, ಉರ್ದು,ಅರೆಬಿಕ್ ಭಾಷೆಗಳಲ್ಲಿ ಸ್ಕಿಟ್,ಕಿರು ನಾಟಕ, ಅಭಿನಯ ಗೀತೆ ಮುಂತಾದ ವುಗಳನ್ನು ಪ್ರದರ್ಶಿಸಿದರು. ತಿರುವಾದಿರ, ಒಪ್ಪನ, ದಫ್ ಮುಟ್, ನೃತ್ಯಗಳನ್ನು ಪ್ರದರ್ಶಿಸಿದರು.