ಜನರಲ್ ಆಸ್ಪತ್ರೆಯಲ್ಲಿ ಪ್ರದರ್ಶನವಸ್ತುವಾಗಿ ಉಳಿದ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್

ಕಾಸರಗೋಡು: ಜನರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವುದಾಗಿ ತಿಳಿಸುತ್ತಾ ರಾಜ್ಯ ಸಚಿವ ಸಂಪುಟ ನವಕೇರಳ ಯಾತ್ರೆ ನಡೆಸುತ್ತಿರುವಾಗಲೇ  ಕಾಸರಗೋ ಡಿನಲ್ಲಿ ರೋಗಿಗಳಿಗೆ ಅತ್ಯಗತ್ಯವಾಗಿ ಲಭಿಸಬೇಕಾದ ಚಿಕಿತ್ಸೆ ಲಭಿಸದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಸರಗೋಡಿನ  ಬಹುತೇಕ ಜನರು ಆಶ್ರಯಿಸುವ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವಿವಿಧ ಸಮಸ್ಯೆಗಳು ದೀರ್ಘ ಕಾಲದಿಂದ ಕಾಡುತ್ತಿದೆಯಾದರೂ ಅವರ ಪರಿಹಾರಕ್ಕೆ ಕ್ರಮ ಉಂಟಾಗಿಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ವೆಂಟಿಲೇಟರ್‌ಗಳು ಇದ್ದರೂ ಅವುಗಳು ಉಪಯೋಗ ವಿಲ್ಲದೆ ಕೇವಲ ಪ್ರದರ್ಶನವಸ್ತು ಗಳಂತೆಯೇ ಉಳಿದುಕೊಂಡಿವೆ. ಇದರ ಪರಿಣಾಮವಾಗಿ ರೋಗಿಗಳು ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಅವಲಂಭಿಸಬೇಕಾದ ಸ್ಥಿತಿ ಉಂಟಾಗಿದೆ. ಆದರೆ ಬಡ ರೋಗಿಗಳು ಅದೂ ಸಾಧ್ಯವಾಗದೆ ಅನುಭವಿಸುವ ಸಂಕಷ್ಟದ ಕುರಿತು ಅಧಿಕಾರಿಗಳಿಗೆ ತಿಳಿದಿದ್ದರೂ ಅವರೂ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.

ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿನ್ಮಯ ಮಿಷನ್ ೩೫ ಲಕ್ಷ ರೂಪಾಯಿ ಖರ್ಚಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಿಕೊಟ್ಟಿತ್ತು. ಕಳೆದ ಜೂನ್ ತಿಂಗಳಲ್ಲಿ ಅದರ ಉದ್ಘಾಟನೆ ನಡೆಸಲಾಗಿದೆ. ಆದರೆ ಅದನ್ನು ನಿರ್ವಹಿಸಲು ತಿಳಿದಿರುವ ಟೆಕ್ನೀಶಿ ಯನ್‌ನ್ನು ಇನ್ನೂ ನೇಮಿಸಲಾಗಿಲ್ಲ. ಈ ಕಾರಣದಿಂದಾಗಿ ಆಕ್ಸಿಜನ್ ಪ್ಲಾಂಟ್‌ನ ಚಟುವಟಿಕೆ ಇನ್ನೂ ಆರಂಭಗೊಂಡಿಲ್ಲ. ಅದೇ ರೀತಿ ಶಾಸಕರ ನಿಧಿಯಿಂದ ಹಣ ವ್ಯಯಿಸಿ  ನಾಲ್ಕು ವೆಂಟಿಲೇಟರ್‌ಗಳನ್ನು ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ. ಆದರೆ ಅದರ ಚಟುವಟಿಕೆಯನ್ನು ಆರಂಭಿಸಿಲ್ಲ. ಆಕ್ಸಿಜನ್ ಹಾಗೂ ವೆಂಟಿಲೇಟರ್‌ಗಳು ರೋಗಿಗಳಿಗೆ ಅತ್ಯಗತ್ಯವಾದ ಸಂದರ್ಭದಲ್ಲಿ ಅವುಗಳನ್ನು ಬಳಸಲಾಗದೆ ಆಸ್ಪತ್ರೆ ಅಧಿಕಾರಿಗಳು ಮೌನ ವಹಿಸುತ್ತಿದ್ದಾರೆ. ಆದರೆ ರೋಗಿಗಳು ಅನ್ಯ ದಾರಿಯಿಲ್ಲದೆ ಖಾಸಗಿ ಆಸ್ಪತ್ರೆಗಳತ್ತ ತೆರಳಬೇಕಾದ ಸ್ಥಿತಿ ಎದುರಾಗಿದೆ.

ಅದೇ ರೀತಿ ಆಸ್ಪತ್ರೆಯಲ್ಲಿ ಅಗತ್ಯ ವುಳ್ಳ ಕಾರ್ಡಿಯೋಲಜಿಸ್ಟ್‌ಗಳನ್ನು ನೇಮಿಸಲು ಕ್ರಮ ಉಂಟಾಗಿಲ್ಲ. ಈ ಎಲ್ಲಾ  ಕಾರಣಗಳಿಂದಾಗಿ ಕಾಸರಗೋ ಡು ಜನರಲ್ ಆಸ್ಪತ್ರೆಯಲ್ಲಿ ರೋಗಿಗಳು ಎದುರಿಸಬೇಕಾದ ಸಂಕಷ್ಟ ಹೇಳತೀರ ದ್ದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಜವಾಬ್ದಾರಿ ವಹಿಸುತ್ತಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲವೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಸ್ಥಿತಿ ಇದಾದರೆ ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ಸ್ಥಿತಿಯೂ ಚಿಂತಾಜನಕವಾಗಿದೆ. ಇಲ್ಲಿ ಅಗತ್ಯದ ವೈದ್ಯರಿಲ್ಲದೆ ಸಮಸ್ಯೆ ಎದುರಾಗಿದ್ದು ಇದರಿಂದ ಆದಿತ್ಯವಾರಗಳಲ್ಲಿ ತಪಾಸಣೆ ಮೊಟಕುಗೊಂಡಿದೆ. ಸಂಜೆ ಹೊತ್ತಿನಲ್ಲಿ ಕಾರ್ಯಾಚರಿಸುತ್ತಿದ್ದ ಒ.ಪಿ ಮೊಟ ಕುಗೊಂಡ ಬೆನ್ನಲ್ಲೇ ಆದಿತ್ಯವಾರವೂ ಒಪಿ ಮೊಟಕುಗೊಳ್ಳುವುದರೊಂದಿಗೆ ಈ ಭಾಗದ ರೋಗಿಗಳು ಸಂಕಷ್ಟಕ್ಕೊಳಗಾಗಿ ದ್ದಾರೆ. ನೂತನವಾಗಿ ವೈದ್ಯರು ನೇಮ ಕಾತಿ ಗೊಳ್ಳುವವರೆಗೆ ಆದಿತ್ಯವಾರ ಗಳಂದು ಒ.ಪಿ ಇರದೆಂದು ತಿಳಿಸಿ ಆಸ್ಪತ್ರೆಯಲ್ಲಿ ಫಲಕ ಇರಿಸಲಾಗಿದೆ.

ಕುಟುಂಬ ಆರೋಗ್ಯ ಕೇಂದ್ರದಲ್ಲಿ ಮೂವರು ವೈದ್ಯರುಗಳು ಬೇಕಾಗಿದ್ದಾರೆ. ಆದರೆ ಅರ್ದ್ರಂ ಯೋಜನೆ ಮೂಲಕ ತಾತ್ಕಾಲಿಕವಾಗಿ ನೇಮಿಸಿದ ಒಬ್ಬರ ಸಹಿತ ಇಬ್ಬರು ವೈದ್ಯರು ಮಾತ್ರವೇ ಇಲ್ಲಿದ್ದಾರೆ. ಈ ಹಿಂದೆ ಮೂವರು ವೈದ್ಯರು ಇಲ್ಲಿದ್ದರು. ಈ ವೇಳೆ ಸಂಜೆ  ೬ ಗಂಟೆವರೆಗೆ ರೋಗಿಗಳ ತಪಾಸಣೆ ನಡೆಯುತ್ತಿತ್ತು) ಆದಿತ್ಯವಾರವೂ ಒಪಿ ಕಾರ್ಯಾಚರಿಸುತ್ತಿತ್ತು. ಆದರೆ ಓರ್ವ ವೈದ್ಯರನ್ನು ಜೂನ್‌ನಲ್ಲಿ ವರ್ಗಾ ಯಿಸಿದ್ದಲ್ಲದೆ ಬದಲಿ ನೇಮಕಾತಿ ನಡೆದಿಲ್ಲ. ಇದರಿಂದ ಆಸ್ಪತ್ರೆ ಚಟುವಟಿಕೆ ಅಸ್ತವ್ಯಸ್ತಗೊಂಡಿದೆ. ಸಮೀಪದ ವಿವಿಧ ಪಂಚಾಯತ್‌ಗಳಿಂದಾಗಿ ದಿನಂಪ್ರತಿ ೨೦೦ಕ್ಕೂ ಹೆಚ್ಚು ರೋಗಿಗಳು ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರಕ್ಕೆ ತಲುಪುತ್ತಿದ್ದಾರೆ. ಆಸ್ಪತ್ರೆಗೆ ಹೊಸ ಕಟ್ಟಡ, ಮೂಲಭೂತ ಸೌಕರ್ಯಗಳು,  ಲ್ಯಾಬ್ ವ್ಯವಸ್ಥೆ ಇದೆ. ಆದರೆ ವೈದ್ಯರು ಇಲ್ಲದ ಮೇಲೆ ಇದೆಲ್ಲಾ ಇದ್ದರೇನು ಪ್ರಯೋಜನ ಎಂಬಂತಾಗಿದೆ ಸ್ಥಿತಿ.

ಇದೇ ವೇಳೆ ಕಾಸರಗೋಡು ಜನರಲ್ ಆಸ್ಪತ್ರೆಯ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಏಮ್ಸ್ ಕಾಸರಗೋಡು ಜನಪರ ಒಕ್ಕೂಟ ಚಳವಳಿ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದೆ. ಆಸ್ಪತ್ರೆಯಲ್ಲಿ ಅಗತ್ಯವುಳ್ಳ ಆಕ್ಸಿಜನ್ ಪ್ಲಾಂಟ್, ವೆಂ?ಟಿಲೇಟರ್‌ನ ಚಟುವಟಿಕೆ ಆರಂಭಿಸಲು ಹಾಗೂ ಅಗತ್ಯದ ವೈದ್ಯ ರು, ಟೆಕ್ನೀಶಿಯನ್‌ಗಳನ್ನು ನೇಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದೂ, ಇಲ್ಲದಿದ್ದಲ್ಲಿ ಚಳವಳಿಗೆ ಮುಂದಾ ಗುವುದಾಗಿ ಏಮ್ಸ್ ಕಾಸರಗೋಡು ಜನಪರ ಒಕ್ಕೂಟ ತಿಳಿಸಿದೆ. ಇದೇ ಬೇಡಿಕೆ ಮುಂದಿರಿಸಿ ಏಮ್ಸ್  ಒಕ್ಕೂ ಟದ ಅಧ್ಯಕ್ಷ ಗಣೇಶ್ ಅರಮಂಗಾನ, ಪ್ರಧಾನ ಕಾರ್ಯದರ್ಶಿ ಮುರಳೀಧರನ್, ಪಡನ್ನಕ್ಕಾಡ್, ಕೋಶಾಧಿಕಾರಿ ಸಲೀಂ ಸಂದೇಶಂ ಚೌಕಿ ಎಂಬಿವರು ಜನರಲ್ ಆಸ್ಪತ್ರೆಯ ಸುಪರಿಂಟೆಂಡೆಂಟ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page