ಜನರಲ್ ಆಸ್ಪತ್ರೆಯ ಶೋಚನೀಯ ಸ್ಥಿತಿ ಪರಿಹರಿಸಲು ಬಿಜೆಪಿ ತಂಡದಿಂದ ನಗರಸಭಾಧ್ಯಕ್ಷರ ಭೇಟಿ
ಕಾಸರಗೋಡು: ನಗರಸಭಾ ಆಡಳಿ ತದಲ್ಲಿರುವ ಕಾಸರಗೋಡು ಜನರಲ್ ಆಸ್ಪತ್ರೆಯ ಸ್ಥಿತಿ ಶೋಚನೀಯವಾಗಿದೆ ಎಂದು ಬಿಜೆಪಿ ದೂರಿದೆ. ಇಲ್ಲಿ ಸುಮಾರು 16 ತಜ್ಞವೈದ್ಯರ ಕೊರತೆ ಇದ್ದು, ಇದರಿಂದಾಗಿ ಇಲ್ಲಿಗೆ ಬರುವ ರೋಗಿಗಳು ಸಂಕಷ್ಟ ಪಡುವ ಸ್ಥಿತಿ ಇದೆ ಎಂದು ಬಿಜೆಪಿ ದೂರಿದೆ. ಸರ್ಜನ್‌ರ ಕೊರತೆ, ವಿದ್ಯುತ್ ಇಲ್ಲದ ದಿನಗಳಲ್ಲಿ ಎಕ್ಸ್‌ರೇ ತೆಗೆಯಲಾಗದ ಸ್ಥಿತಿ, ಜನರೇಟರ್ ವ್ಯವಸ್ಥೆ ಇಲ್ಲದಿರುವುದು, ರೋಗಿಗಳ ಭೇಟಿಗೆ ಬಂದವರಿಂದ 10 ರೂ. ಶುಲ್ಕ ಮಾಡುತ್ತಿರುವುದು ಮೊದಲಾ ದವುಗಳ ಬಗ್ಗೆ ಗಮನ ಸೆಳೆಯಲು ಬಿಜೆಪಿ ತಂಡ ಕಾಸರಗೋಡು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂರನ್ನು ಭೇಟಿ ಮಾಡಿತು. ಈ ಬಗ್ಗೆ ನಡೆದ ಚರ್ಚೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಕೆ.ಆರ್, ನಗರಸಮಿತಿ ಉಪಾಧ್ಯಕ್ಷ ಪುರುಷೋತ್ತಮನ್, ಮಣಿ ಎನ್, ಚಂದ್ರಶೇಖರ, ಭಾಸ್ಕರ, ಗಣೇಶ್ ನಾಯ್ಕ್, ಉಮಾ ಭಾಗವಹಿಸಿದರು.