ಜಿಲ್ಲಾಧಿಕಾರಿಯ ಗ್ರಾಮ ಅದಾಲತ್ ಪೂರ್ಣ

ಕಾಸರಗೋಡು: ಜಿಲ್ಲೆಯ ಗ್ರಾಮ ಕಚೇರಿಗಳಲ್ಲಿ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನಡೆಸಿದ ಗ್ರಾಮ ಅದಾಲತ್ ಪೂರ್ಣಗೊಂಡಿತು. ಎರಡು ಹಂತಗಳಲ್ಲಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಜಿಲ್ಲಾಧಿಕಾರಿ ಅದಾಲತ್ ನಡೆಸಿ ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದರು. 129 ಗ್ರಾಮಗಳಿಂದಾಗಿ ಒಟ್ಟು 3664 ದೂರುಗಳು ಅದಾಲತ್‌ಗೆ ಲಭಿಸಿದೆ. ಮಂಜೇಶ್ವರ ತಾಲೂಕಿನ ವಿವಿಧ ಗ್ರಾಮಗಳಿಂದ 1075 ದೂರುಗಳು, ಕಾಸರಗೋಡು ತಾಲೂಕಿನ ಗ್ರಾಮಗಳಿಂದ 373 ದೂರುಗಳು, ಹೊಸದುರ್ಗ ತಾಲೂಕಿನಲ್ಲಿ 1565, ವೆಳ್ಳೇರಿಕುಂಡ್ ತಾಲೂಕಿನಲ್ಲಿ 651 ದೂರುಗಳು ಲಭಿಸಿದೆ. ಲಭಿಸಿದ ದೂರುಗಳಿಗೆ ಪರಿಹಾರ ಕಲ್ಪಿಸುವ ಕ್ರಮಗಳು ಆರಂಭಗೊಂಡಿದೆ. ಅದಾಲತ್‌ಗಳಲ್ಲಿ ಪತ್ತೆಹಚ್ಚಲಾದ ಸಮಸ್ಯೆಗಳಿಗೆ ಯಥಾಸಮಯ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

You cannot copy contents of this page