ಜಿಲ್ಲಾಧಿಕಾರಿ ವಿಲ್ಲೇಜ್ ಅದಾಲತ್ನಲ್ಲಿ ಸ್ವೀಕರಿಸಿದ 1286 ದೂರುಗಳಿಗೆ ಪರಿಹಾರ
ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಅಧಿಕಾರ ವಹಿಸಿ ಕೊಂಡು ಒಂದು ವರ್ಷ ಪೂರ್ತಿಯಾಗುವುದರೊಳಗೆ ನೇರವಾಗಿ ಸಂದರ್ಶಿಸಿ ಲಭಿಸುವ ದೂರುಗಳಲ್ಲಿ 1286 ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ವಿಲೇಜ್ ಅದಾಲತ್ ಕಾರ್ಯಕ್ರಮಗಳಲ್ಲಿ 1472 ದೂರುಗಳು ಲಭಿಸಿತ್ತು. ಜಿಲ್ಲೆಯ 29 ವಿಲ್ಲೇಜ್ಗಳನ್ನು ಜಿಲ್ಲಾಧಿಕಾರಿ ಇದುವರೆಗೆ ಸಂದರ್ಶಿ ಸಿದ್ದಾರೆ. ಉಳಿದ 186 ದೂರುಗಳನ್ನು ಪರಿಗಣಿಸಲಾಗುತ್ತಿದೆ. ಕೊಯಿಪ್ಪಾಡಿ, ಎಡನಾಡು, ಉಪ್ಪಳ, ಕಡಂಬಾರ್, ಎಣ್ಮಕಜೆ, ಮೀಂಜ, ಬಂಬ್ರಾಣ, ಬಾಯಾರು, ಮಧೂರು, ಕೂಡ್ಲು, ಕಾಸರಗೋಡು, ನೀರ್ಚಾಲ್, ಬದಿಯಡ್ಕ, ಮುಳಿಯಾರು, ಬೇಳ, ಆದೂರು ಸಹಿತ 29 ವಿಲ್ಲೇಜ್ಗಳಲ್ಲಿ ಅದಾಲತ್ ನಡೆಸಿದ್ದರು.
ಕಳೆದ ಆಗಸ್ಟ್ ತಿಂಗಳಲ್ಲಿ ಕೊಯಿ ಪ್ಪಾಡಿಯಿಂದ ಆರಂಭಗೊAಡ ವಿಲ್ಲೇಜ್ ಅದಾಲತ್ ಅಕ್ಟೋಬರ್ 17ರಂದು ಬಾಯಾರು ವಿಲ್ಲೇಜ್ನಲ್ಲಿ ಸಮಾಪ್ತಿಗೊಂ ಡಿತು. ದ್ವಿತೀಯ ಹಂತದ ವಿಲ್ಲೇಜ್ ಅದಾಲತ್ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.