ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಜಕೂಡ್ಲಿನ ಪ್ರತಿಭೆ
ಪೆರ್ಲ: ತಾಲೂಕು ಮಟ್ಟದ ಶಾಲಾ ಕ್ರಿಕೆಟ್ ಪಂದ್ಯಾಟದಲ್ಲಿ ಮಂಜೇಶ್ವರ ತಂಡದ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ತಂಡ ಜಯಭೇರಿ ಬಾರಿಸಿದೆ. ಫೈನಲ್ ಪಂದ್ಯಾಟದಲ್ಲಿ ಬೌಲಿಂಗ್ ನಡೆಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಂಕಿತ್ ಬಜಕೂಡ್ಲು ಜಿಲ್ಲಾ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ಕೇರಳ ರಾಜ್ಯ ಶಾಲಾ ಮಟ್ಟದ ಕ್ರಿಕೆಟ್’ನಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ. ಪೆರ್ಲ ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಅಂಕಿತ್ ಅವರನ್ನು ತರಬೇತುಗೊಳಿಸಿದ್ದಾರೆ. ಬಜಕೂಡ್ಲು ನಿವಾಸಿ ಶ್ರೀ ಅಶೋಕ್ ರೈ-ಸುನೀತಾ ದಂಪತಿ ಪುತ್ರ ಹಾಗೂ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸಕ್ರಿಯ ಸದಸ್ಯರಾಗಿದ್ದಾರೆ.