ಜಿಲ್ಲಾ ಪಂಚಾಯತ್ ಬಜೆಟ್ ಫೆ.೧೨ರಂದು ಮಂಡನೆ

ಕಾಸರಗೋಡು:  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್‌ರ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಆಡಳಿತ ಸಮಿತಿ ಸಭೆಯಲ್ಲಿ ವಾರ್ಷಿಕ ಯೋಜನೆಯಲ್ಲ್ಲಿ ಸೇರಿಸಬೇಕಾದ ಯೋಜನೆ ನಿರ್ದೇಶಗಳಿಗೆ ಅಂತಿಮ ರೂಪು ನೀಡಲಾಯಿತು. ಮುಂದಿನ ವರ್ಷದ ಬಜೆಟ್ ಮಂಡನೆ ಈ ತಿಂಗಳ ೧೨ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂ. ಅಧ್ಯಕ್ಷೆ ತಿಳಿಸಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ಆರ್ಥಿಕ ವರ್ಷದ ಲೇಬರ್ ಬಜೆಟ್‌ಗೆ ಸಭೆ ಅಂಗೀಕಾರ ನೀಡಿತು. ಜಿಲ್ಲಾ ಪಂಚಾಯತ್ ಈ ವರ್ಷ ಜ್ಯಾರಿಗೊಳಿಸುವ ವಿವಿಧ ಕಾಮಗಾರಿಗಳ ಟೆಂಡರ್‌ಗಳನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾಕೃಷ್ಣನ್, ಎಸ್.ಎನ್. ಸರಿತ, ಎಂ. ಮನು,  ಸದಸ್ಯರಾದ ಸಿ.ಜೆ. ಸಜಿತ್, ಜೋಮೋನ್ ಜೋಸ್, ಗೋಲ್ಡನ್ ಅಬ್ದುಲ್ ರಹ್ಮಾನ್, ನಾರಾಯಣ ನಾಯ್ಕ್, ಕೆ. ಕಮಲಾಕ್ಷಿ, ಜಾಸ್ಮಿನ್ ಕಬೀರ್, ಜಮೀಲಾ ಸಿದ್ದಿಕ್, ಬ್ಲೋಕ್ ಪಂ. ಅಧ್ಯಕ್ಷೆ ಸಿ.ಎ. ಸೈಮಾ, ಕಾರ್ಯದರ್ಶಿ ಪಿ.ಕೆ. ಸಜೀವ್ ಸಹಿತ ಹಲವು ಅಧಿಕಾರಿಗಳು ಭಾಗವಹಿಸಿದರು.

You cannot copy contents of this page