ಜಿಲ್ಲಾ ಮಟ್ಟದ ಪ್ಲಾಸ್ಟಿಕ್ ಬದಲಿ ಉತ್ಪನ್ನ ಪ್ರದರ್ಶನ ಮಾರಾಟ ಮೇಳ
ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಶನ್ ನೇತೃತ್ವದಲ್ಲಿ ಜಿಲ್ಲೆಯ ೪೨ ಕಟುಂಬಶ್ರೀ ಸಿಡಿಎಸ್ನ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ಲಾಸ್ಟಿಕ್ ಬದಲಿ ಉತ್ಪನ್ನ ಪ್ರದರ್ಶನ ಮಾರಾಟ ಮೇಳ ನಡೆಯಲಿದೆ. ನಾಳೆ ಬೆಳಿಗ್ಗೆ ೧೦ರಿಂದ ೫ರವರೆಗೆ ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಪರಿಸರದಲ್ಲಿ ಮೇಳ ನಡೆಯಲಿದೆ. ಪ್ಲಾಸ್ಟಿಕ್ ಬದಲಿ ಉತ್ಪನ್ನಗಳನ್ನು ಪರಿಚಯ ಪಡಿಸಲು, ಲಭ್ಯತೆ ಖಚಿತಪಡಿಸಲು ಮೇಳ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡಲು, ವ್ಯಾಪಾರಿಗಳಿಗೆ, ಇವಂಟ್ ಮೆನೇಜ್ಮೆಂಟ್ ಗ್ರೂಪ್ಗಳು, ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬದಲಿ ಉತ್ಪನ್ನ ಲಭ್ಯತೆ ಖಚಿತಪಡಿಸಲು ಮೇಳದಿಂದ ಉದ್ದೇಶಿಸಲಾಗಿದೆ.