ಜಿಲ್ಲಾ ವರಿಷ್ಠ ಅಧಿಕಾರಿಯಾಗಿ ಡಿ. ಶಿಲ್ಪಾ ಅಧಿಕಾರ ಸ್ವೀಕಾರ
ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಕನ್ನಡತಿಯಾಗಿರುವ ಡಿ. ಶಿಲ್ಪಾ ನಿನ್ನೆ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿನ್ನೆ ಅವರಿಗೆ ಈ ತನಕ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿದ್ದ ಪಿ. ಬಿಜೊ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್.ಪಿ ಪಿ. ಬಾಲಕೃಷ್ಣನ್ ನಾಯರ್, ಡಿವೈಎಸ್ಪಿಗಳಾದ ಸಿ.ಕೆ. ಸುನಿಲ್ ಕುಮಾರ್,ವಿ.ವಿ ಮನೋಜ್, ಬಾಬು ಪೆರಿಂಙೋತ್ ಮೊದಲಾದವರು ಈ ವೇಳೆ ಸನ್ನಿಹಿತರಾಗಿದ್ದರು.