ಜಿಲ್ಲೆಯಲ್ಲಿ ಅರಣ್ಯ ಠಾಣೆ ಸ್ಥಾಪನೆ: ಶಾಸಕ ಕುಂಞಂಬುರ ಗೊತ್ತುವಳಿಗೆ ಅರಣ್ಯ ಇಲಾಖೆ ಸಚಿವರ ಉತ್ತರ
ಕಾಸರಗೋಡು: ಜಿಲ್ಲೆಯ ಮಲೆನಾಡು ಪಂಚಾಯತ್‌ಗಳಲ್ಲಿ ಚಿರತೆ ಭೀತಿಯನ್ನು ಹಿಮ್ಮೆಟ್ಟಿಸಲು ಖಾಯಂ ಅರಣ್ಯ ಠಾಣೆಗಳನ್ನು ಹಾಗೂ ಆಧುನಿಕ ಉಪಕರಣಗಳನ್ನು ಸಜ್ಜುಗೊಳಿಸಲಾಗು ವುದೆಂದು ಸಚಿವ ಎ.ಕೆ. ಶಶೀಂದ್ರನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಶಾಸಕ ಸಿ.ಎಚ್. ಕುಂಞಂಬು ವಿಧಾನಸಭೆಯಲ್ಲಿ ಮಂಡಿಸಿದ ಗೊತ್ತುವಳಿಗೆ ಉತ್ತರವಾಗಿ ಅವರು ಈ ವಿಷಯ ತಿಳಿಸಿದ್ದಾರೆ. ಅಗತ್ಯದ ಹುದ್ದೆಯನ್ನು ಸೇರಿಸಿಕೊಂಡು ಜಿಲ್ಲಾ ಫಾರೆಸ್ಟ್ ಠಾಣೆಯ ಪ್ರೊಪೋಸಲ್ ಸಲ್ಲಿಸಲು ಅರಣ್ಯ ಇಲಾಖೆ ಉನ್ನತಾಧಿ ಕಾರಿಗೆ ಆಗ್ರಹಿಸಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯ ಕಾರಡ್ಕ, ಮುಳಿಯಾರು, ದೇಲಂಪಾಡಿ, ಪುಲ್ಲೂರು-ಪೆರಿಯ, ಬೇಡಡ್ಕ, ಕುತ್ತಿಕ್ಕೋಲ್, ಮಡಿಕೈ ಪಂಚಾಯತ್‌ಗಳ ವನಪ್ರದೇಶಕ್ಕೆ ಸೇರಿಕೊಂಡಿರುವ ಜನವಾಸ ವಲಯ ದಲ್ಲಿ ಚಿರತೆಯ ಪತ್ತೆ ಖಚಿತಪಡಿಸಲಾ ಗಿದೆ. ಕಾಡುಪ್ರಾಣಿಗಳ ಬಗ್ಗೆ ನಿಗಾ ವಹಿಸಲು ಹೊಸ ವೈಫೈ ಟೆಕ್ನೋಲಜಿ ಯಲ್ಲಿರುವ ಕ್ಯಾಮರಾ ಖರೀದಿಸಲಾಗು ವುದು. ಪ್ರಸ್ತುತ ಡ್ರೋನ್ ಉಪಯೋಗಿಸಿ ರಾತ್ರಿ ವೇಳೆಯಲ್ಲಿ ತಪಾಸಣೆ ಮುಂದು ವರಿಸಲಾಗುವುದು. ಹೊಸ ಇನ್ನೊಂದು ಡ್ರೋನ್ ಕ್ಯಾಮರಾ ಖರೀದಿಸುವುದು, ಹೊಸ ಎರಡು ಫೋರ್ ವ್ಹೀಲರ್ ವಾಹನಗಳನ್ನು ಈಗಾಗಲೇ ಖರೀದಿಸಿರು ವುದಾಗಿಯೂ ಅವರು ನುಡಿದರು. ಮುಳಿಯಾರು, ಕಾರಡ್ಕ ಪಂಚಾಯತ್ ಗಳ ಚಿರತೆ ಭೀತಿ ನೆಲೆಗೊಂಡ ೧೭ ಕಡೆಗಳಲ್ಲಿ ಬೀದಿ ದೀಪ ಸ್ಥಾಪಿಸಲಾಗು ವುದು. ರಸ್ತೆಗೆ ಹೊಂದಿಕೊಂಡಿರುವ ಕಾಡು ಪ್ರದೇಶದ ಅಕೇಶಿಯಾ ಸಹಿತದ ಮರಗಳನ್ನು ಕಡಿದು ಶುಚಿಗೊಳಿಸಲಾ ಗುವುದು. ಮುಳಿಯಾರು, ಕಾರಡ್ಕ ಪಂಚಾಯತ್‌ಗಳಲ್ಲಿ ಜನಜಾಗೃತ ಸಮಿತಿಗಳ ಸಭೆ ನಡೆಸಲಾಗಿದೆ. ಎಕ್ಸ್ ಪರ್ಟ್ ಕಮಿಟಿಯನ್ನು ರೂಪೀಕರಿಸಿ ಚಿರತೆಯನ್ನು ಗೂಡು ಸ್ಥಾಪಿಸಿ ಸೆರೆ ಹಿಡಿಯಲು ಎರಡು ಗೂಡುಗಳನ್ನು ಖರೀದಿಸಲಾಗಿದೆ. ಸತತವಾಗಿ ಚಿರತೆ ಕಂಡು ಬಂದ ಸ್ಥಳದಲ್ಲಿ ಈ ಗೂಡುಗಳನ್ನು ಸ್ಥಾಪಿಸಲಾಗಿದೆ. ನಾಲ್ಕು ಶಾಲೆಗಳಲ್ಲಿ ಪ್ರತ್ಯೇಕ ಅಸ್ಸೆಂಬ್ಲಿ ಕರೆದು ಜಾಗೃತಿ ನಿರ್ದೇಶ ನೀಡಲಾಗಿದೆ. ಬೋ ವಿಕ್ಕಾನದಲ್ಲಿರುವ ಕ್ಷಿಪ್ರ ಕ್ರಿಯಾ ಸೇನೆ ರಾತ್ರಿ ಹಾಗೂ ಹಗಲು ಪ್ರತ್ಯೇಕವಾಗಿ ಪಟ್ರೋಲಿಂಗ್ ನಡೆಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.