ಜಿಲ್ಲೆಯಲ್ಲಿ ನಿನ್ನೆ ೧೧೪೪ ಭೂಮಿ ಹಕ್ಕುಪತ್ರ ವಿತರಣೆ

ಕಾಸರಗೋಡು: ರಾಜ್ಯ ಸರಕಾರ  ಭರವಸೆಯನ್ನು ಒಂದೊಂದಾಗಿ ಜ್ಯಾರಿಗೊಳಿಸುವುದರಂಗವಾಗಿ ಭೂಮಿ ರಹಿತರಿಗೆ ಭೂಮಿ ನೀಡುತ್ತಿರುವುದಾಗಿ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ನುಡಿದರು. ಸರಕಾರದ ಮೂರನೇ  ಭೂಮಿ ಹಕ್ಕು ಪತ್ರ ಮೇಳದ ಅಂಗವಾಗಿ ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡು ತ್ತಿದ್ದರು. ಕಳೆದ ಎರಡು ಬಾರಿಯಾಗಿ ಜಿಲ್ಲೆಯಲ್ಲಿ ೨೬೭೧ ಪಟ್ಟಾವನ್ನು ವಿತರಿಸಲಾಗಿದೆ. ಮೂರನೇ ಬಾರಿಯಾಗಿ ಈಗ ೧೧೪೪ ಹಕ್ಕುಪತ್ರಗಳನ್ನು ವಿತರಿಸುತ್ತಿ ರುವುದಾಗಿ ಸಚಿವರು ನುಡಿದರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಜಿಲ್ಲಾ ಪಂಚಾ ಯತ್ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ನಗರಸಭಾ ಸದಸ್ಯೆ ವಿಮಲಾ ಶ್ರೀಧರನ್,  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಾದ ಕೆ.ಎ. ಮುಹಮ್ಮದ್ ಹನೀಫ್, ಬಿಜು ಉಣ್ಣಿತ್ತಾನ್, ಬಿ. ಅಬ್ದುಲ್ ಗಫೂರ್, ಕರೀಂ ಮೈಲ್‌ಪಾರ, ಎಂ. ಅನಂತನ್ ನಂಬ್ಯಾರ್, ಪ್ರಮಿಳಾ ಮಜಲ್, ಅಬ್ದುಲ್ಲ, ಎಡಿಎಂಕೆ ವಿ. ಶ್ರುತಿ ಮಾತನಾಡಿದರು.  ನಿನ್ನೆ ೧೧೪೪ ಮಂದಿಗೆ ಭೂಮಿ ಹಕ್ಕುಪತ್ರ ವಿತರಿಸಲಾಗಿದೆ. ೮೬೮ ಲ್ಯಾಂಡ್ ಟ್ರಿಬ್ಯೂನಲ್, ೬೬ ಲ್ಯಾಂಡ್ ಟ್ರಿಬ್ಯೂನಲ್ ದೇವಸ್ವಂ, ೧೯೬೪ ರೂಲ್ ಪ್ರಕಾರ೧೪೮ ಎಲ್‌ಎ, ೧೯೯೫ ರೂಲ್ ಪ್ರಕಾರ ೯, ೩೧ವನಭೂಮಿ, ೩ ಲ್ಯಾಂಡ್ ಬ್ಯಾಂಕ್, ೧೯ ಮಿಗತೆ ಭೂಮಿ ಎಂಬೀ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ೪೦ ವರ್ಷದ ಕಾಯುವಿಕೆಗೆ ಅಂತ್ಯಹಾಡಿ ವಲಿಯಪರಂಬ ಮಾವಿಲಕಡಪ್ಪುರಂ ಫಿಶರೀಸ್ ಕಾಲನಿಯ ೧೪ ಕುಟುಂಬಗಳಿಗೆ ಪಟ್ಟಾ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page