ಜಿಲ್ಲೆಯ ಬ್ಯಾಂಕ್‌ಗಳಲ್ಲಿ ೧೫,೭೬೯.೨೮ ಕೋಟಿ ರೂ. ಠೇವಣಿ

ಕಾಸರಗೋಡು: ಈ ಆರ್ಥಿಕ ವರ್ಷದ ದ್ವಿತೀಯ ಹಂತದಲ್ಲಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ  ನಡೆಸಲಾದ ಆರ್ಥಿಕ ವ್ಯವಹಾರಗಳ ಬಗ್ಗೆ ಜಿಲ್ಲಾ ಮಟ್ಟದ ಬ್ಯಾಂಕ್‌ನ ಸಭೆಯಲ್ಲಿ ಅವಲೋಕನೆ ನಡೆಸ ಲಾಯಿತು.ಈ  ಆರ್ಥಿಕ ವರ್ಷದ ದ್ವಿತೀ ಯ ಹಂತದಲ್ಲಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ  ಒಟ್ಟು ೧೫,೭೬೯.೨೮ ಕೋಟಿ ರೂ.ಗಳ ಠೇವಣಿ ಹೊಂದಿದೆ. ೧೩,೭೭೪.೮೫ ಕೋಟಿ ರೂ.ವನ್ನು ಸಾಲ ವಿತರಣೆಗಾಗಿ ಮೀಸಲಿರಿಸಲಾಗಿದೆ.  ಈ ಆರ್ಥಿಕ ವರ್ಷ ದಲ್ಲಿ ಎರಡನೇ ಹಂತದಲ್ಲಿ ೪೬೬೪.೦೫ ಕೋಟಿ ರೂ. ಸಾಲ ನೀಡಲಾಗಿದೆ.

ಕೃಷಿ ಸೇರಿದಂತೆ ಪ್ರಾಥಮಿಕ ವಲಯದಲ್ಲಿ  ೨೫೫೩.೮೭ ಕೋಟಿ ರೂ. ಸಾಲ ನೀಡಲಾಗಿದೆ. ಕಿರು ಮತ್ತು ಮಧ್ಯಮ ವರ್ಗದ ಉದ್ದಿಮೆ ವಲಯಗಳಿಗೆ ೬೯೭.೩೯ ಕೋಟಿ ರೂ. ಸಾಲ ನೀಡಲಾ ಗಿದೆ. ಭವನ, ಶಿಕ್ಷಣ ಒಳಗೊಂಡ ತೃತೀಯ ವಲಯದಲ್ಲಿ ೨೦೩.೦೪ ಕೋಟಿ ರೂ. ಸಾಲ ನೀಡಲಾಗಿದೆ.  ಆದ್ಯತಾ ವಲಯದಲ್ಲಿ ೩೪೫೪.೨೪ ಕೋಟಿ ರೂ. ಮತ್ತು ಆದ್ಯತೇತರ ವಲಯದಲ್ಲಿ   ೧೨೦೯.೮೧ ಕೋಟಿ ರೂ. ಸಾಲ ನೀಡಲಾಗಿದೆಯೆಂದು ಸಭೆಯಲ್ಲಿ ತಿಳಿಸಲಾಯಿತು. ಎಡಿಎಂ ಕೆ. ನವೀನ್ ಬಾಬು ಅವಲೋಕನಾ ಸಭೆಯ ಅಧ್ಯಕ್ಷತೆ ವಹಿಸಿದರು. ಆರ್‌ಬಿಐ ಎಲ್‌ಡಿಒ ಶ್ಯಾಮ್ ಸುಂದರ್, ನಬಾರ್ಡ್ ಡಿಡಿಎಂ ಕೆ.ಬಿ. ದಿವ್ಯ, ಲೀಡ್ ಬ್ಯಾಂಕ್ ಮೆನೇಜರ್ ಎನ್.ವಿ. ಒಮಲ್, ಪಿ. ಹರೀಶ್ ಮೊದಲಾದವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page