ಜಿಲ್ಲೆಯ 50,000 ಸೇರಿ ರಾಜ್ಯದಲ್ಲಿ ಡ್ರೈವಿಂಗ್ ಟೆಸ್ಟ್ಗಾಗಿ ಕಾದು ನಿಂತಿರುವುದು 9.45 ಲಕ್ಷ ಮಂದಿ
ಕಾಸರಗೋಡು: ಡ್ರೈವಿಂಗ್ ಟೆಸ್ಟ್ ಸುಧಾರಣಾ ಕ್ರಮದೊಂದಿಗೆ ಸರಕಾರ ಒಂದೆಡೆ ಸಾಗುತ್ತಿದ್ದರೆ ಅದನ್ನು ವಿರೋಧಿಸಿ ಡ್ರೈವಿಂಗ್ ಸ್ಕೂಲ್ ಸಂಯುಕ್ತ ಸಮಿತಿ ಇನ್ನೊಂದೆಡೆ ಪ್ರತಿಭಟನೆಗಿಳಿದಿರುವುದರಿಂದಾಗಿ ಡ್ರೈವಿಂಗ್ ಟೆಸ್ಟ್ಗಾಗಿ ಅರ್ಜಿ ಸಲ್ಲಿಸಿ ಕಾದು ನಿಂತಿರುವವರ ಸಂಖ್ಯೆ ರಾಜ್ಯದಲ್ಲಿ ಈಗ 9.45ಲಕ್ಷಕ್ಕೇರಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವಾಗಿ 50,000 ಮಂದಿ ಡ್ರೈವಿಂಗ್ ಟೆಸ್ಟ್ಗಾಗಿ ಅರ್ಜಿ ಸಲ್ಲಿಸಿದ್ದು, ಟೆಸ್ಟ್ ಯಾವಾಗ ಪುನರಾರಂಭಿಸಲಿದೆಯೆAಬುವುದು ಇನ್ನೂ ಪ್ರಶ್ನಾರ್ಥಕ ಚೆನ್ಹೆಯಾಗಿಯೇ ಉಳಿದುಕೊಂಡಿದೆ.
ಕಳೆದ ನಾಲ್ಕು ದಿನಗಳಲ್ಲಾಗಿ ರಾಜ್ಯದಲ್ಲಿ 10,320 ಮಂದಿಗೆ ಮಾತ್ರವೇ ಡ್ರೈವಿಂಗ್ ಟೆಸ್ಟ್ ನಡೆಸಲಾಗಿದೆ. ಸುಧಾರಣಾ ಕ್ರಮಗಳನ್ನು ವಿರೋಧಿಸಿ ಡ್ರೈವಿಂಗ್ ಸ್ಕೂಲ್ ಮಾಲಕರ ಸಂಯುಕ್ತ ಸಮಿತಿ ಆರಂಭಿಸಿರುವ ಪ್ರತಿಭಟನೆ ಇನ್ನೂ ಮುಂದುವರಿಯುತ್ತಿರುವುದರಿAದಾಗಿ ಡ್ರೈವಿಂಗ್ ಟೆಸ್ಟ್ ಎಂದು ಪುನರಾರಂ ಭಿಸಲು ಸಾಧ್ಯ ಎಂಬುವುದರ ಬಗ್ಗೆ ಸದ್ಯ ಏನೂ ಹೇಳುವಂತಿಲ್ಲವೆAದು ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆಯಾಗಿ 86 ತರಬೇತಿ ಕೇಂದ್ರಗಳಿವೆ. ಎಪ್ರಿಲ್ ತಿಂಗಳ ತನಕ ಪ್ರತಿದಿನ 100ರಷ್ಟು ಡ್ರೈವಿಂಗ್ ಟೆಸ್ಟ್ ನಡೆಸಲಾಗುತ್ತಿತ್ತು. ಮೇ 2ರಿಂದ ದೈನಂದಿನ ಡ್ರೈವಿಂಗ್ ಟೆಸ್ಟ್ ಸಂಖ್ಯೆಯನ್ನು 30ಕ್ಕಿಳಿಸಲಾ ಯಿತು. ಅದರ ವಿರುದ್ಧ ಪ್ರತಿಭಟನೆ ಎದ್ದಾಗ ಟೆಸ್ಟ್ನ ಸಂಖ್ಯೆಯನ್ನು ಬಳಿಕ 40ಕ್ಕೇರಿಸಲಾಯಿತು. ಅದರಿಂದಲೂ ಸಮಸ್ಯೆಗೆ ಪರಿಹಾರ ಉಂಟಾಗದಾಗ ಆ ಸಂಖ್ಯೆಯನ್ನು ನಂತರ 60ಕ್ಕೇರಿ ಸಲಾಯಿತು. ಆದರೆ ಮುಂಗಡವಾಗಿ ಸ್ಪೋಟ್ ನಿಗದಿಪಡಿಸದೇ ಇದ್ದುದರಿಂದ ಡ್ರೈವಿಂಗ್ ಟೆಸ್ಟ್ ಸಮಸ್ಯೆ ಪರಿಹಾರಗೊಳ್ಳದೆ ಅದು ಇನ್ನೂ ಮುಂದುವರಿಯುತ್ತಿದೆ.
ಡ್ರೈವಿAಗ್ ಟೆಸ್ಟ್ಗಾಗಿ ಅರ್ಜಿ ಸಲ್ಲಿಸಿದವರಿಂದ ಅವರ ಶುಲ್ಕ ರೂಪದಲ್ಲಿ ಮೋಟಾರು ವಾಹನ ಇಲಾಖೆ ಈಗಾಗಲೇ130 ಕೋಟಿ ರೂ. ವಸೂಲಿ ಮಾಡಿದೆ.
ಡ್ರೈವಿಂಗ್ ಟೆಸ್ಟ್ಗೆ ಮೊದಲು ಲರ್ನರ್ಸ್ ಸರ್ಟಿಫಿಕೇಟ್ ಪಡೆಯಬೇಕಾಗಿದೆ. ಅದರ ಆರು ತಿಂಗಳ ಅವಧಿ ಮುಗಿದ ಒಂದು ತಿಂಗಳ ಬಳಿಕ ಡ್ರೈವಿಂಗ್ ಟೆಸ್ಟ್ ಸಾಧಾರಣವಾಗಿ ನಡೆಸಲಾಗುತ್ತಿದೆ. ಲರ್ನರ್ಸ್ ಸರ್ಟಿಫಿಕೇಟ್ಗಾಗಿ 1450 ರೂ. ಶುಲ್ಕ ಪಾವತಿಸಬೇ ಕಾಗಿದೆ. ಅದರ ಆರು ತಿಂಗಳ ಅವಧಿ ಪೂರ್ಣಗೊಂಡ ಬಳಿಕ 300 ರೂ. ಶುಲ್ಕ ಪಾವತಿಸಿ ಅದನ್ನು ಮತ್ತೆ ನವೀಕರಿಸಬೇಕಾಗಿದೆ.