ಜುಗಾರಿ ತಂಡದಿಂದ ಯುವಕನಿಗೆ ಹಲ್ಲೆ: ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವಿಲ್ಲವೆಂದು ಕುಟುಂಬ ಆರೋಪ
ಕುಂಬಳೆ: ಕುಬಣೂರಿನಲ್ಲಿ ಜೂಜಾಟ ತಂಡದ ಆಕ್ರಮಣಕ್ಕೆ ತುತ್ತಾಗಿ ಬೆನ್ನೆಲುಬಿಗೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಯುವಕನಿಗೆ ನೀತಿ ಲಭ್ಯಗೊಳಿಸಬೇಕೆಂದು ಕುಟುಂಬ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋ ಷ್ಠಿಯಲ್ಲಿ ಆಗ್ರಹಿಸಿದೆ. ಬೇಟೆಗಾರರ ತಂಡದ ವ್ಯಕ್ತಿಯೆಂದು ಆರೋಪಿಸಿ ಆರಿಕ್ಕಾಡಿಯ ಫಾರ್ಮಸಿ ನೌಕರ ಸುನಿಲ್ಗೆ ಏಳು ಮಂದಿಯ ತಂಡ ಹಲ್ಲೆ ನಡೆಸಿತ್ತು. ಗಾಯಾಳು ಸುನಿಲ್ನಿಂದ ಕುಂಬಳ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಆದರೆ ಬಳಿಕ ಯಾವುದೇ ಕ್ರಮ ಆರೋಪಿಗಳ ವಿರುದ್ಧ ಕೈಗೊಳ್ಳಲಿಲ್ಲವೆಂದು ಕುಟುಂಬ ಆರೋಪಿಸಿದೆ.
ಜುಗಾರಿ ತಂಡದ ದಬ್ಬಾಳಿಕೆ ಕುಬಣೂರು ಹಾಗೂ ಪರಿಸರದಲ್ಲಿ ನಡೆಯುತ್ತಿದ್ದು, ಈ ವಿಷಯದಲ್ಲಿ ಎರಡು ಭಾಗಗಳು ಘರ್ಷಣೆ ನಡೆಸುತ್ತಿರುವುದು ಇಲ್ಲಿ ಸಾಮಾನ್ಯವಾಗುತ್ತಿದೆಯೆಂದು ಸುನಿಲ್ನ ಕುಟುಂಬ ಆರೋಪಿಸಿದೆ.
ಸುನಿಲ್ಗೆ ಹಲ್ಲೆ ನಡೆಸಿದ ಆರೋಪಿಗಳನ್ನು ರಕ್ಷಿಸಲು ಯತ್ನ ನಡೆಯುತ್ತಿದೆ ಎಂದು ಕುಟುಂಬ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು, ಆರೋಪಿಗಳ ವಿರುದ್ಧ ಕೊಲೆಯತ್ನಕ್ಕೆ ಕೇಸು ದಾಖಲಿಸಬೇಕೆಂದು ಆಗ್ರಹಿ ಸಿದೆ. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿ ಯಲ್ಲಿ ಆನಂದ ಬಾಯಿಕಟ್ಟೆ, ಕೃಷ್ಣ ಪಂಜ, ಜನಾರ್ದನನ್, ಜಯಂತ ಭಾಗವಹಿಸಿದರು.