ಕಾಸರಗೋಡು: ಬಟ್ಟ ತ್ತೂರು-ಚಂದ್ರಪುರಂ ರಸ್ತೆಯ ಸಾರ್ವಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ನಡೆಸುತ್ತಿದ್ದ ಕೇಂದ್ರಕ್ಕೆ ಬೇಕಲ ಎಸ್.ಐ ಎಂ. ಬಾಲಚಂದ್ರನ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂ ಧಿಸಿದ್ದಾರೆ. ಜೂಜಾಟ ಅಡ್ಡೆ ಯಿಂದ ೧೬೭೦ ರೂ. ನಗದು ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.