ಜೈಲಿನಲ್ಲಿ ಖೈದಿಗಳಿಂದ ಹಲ್ಲೆ ಓರ್ವನಿಗೆ ಗಾಯ; ಮೂವರ ವಿರುದ್ಧ ಕೇಸು ದಾಖಲು
ಕಾಸರಗೋಡು: ಮಾದಕದ್ರವ್ಯ ವ್ಯಸನಿಗಳಾದ ಖೈದಿಗಳು ಸೇವಿಸಲು ಮಾದಕದ್ರವ್ಯ ಲಭಿಸದ ದ್ವೇಷದಿಂದ ಇನ್ನೋರ್ವ ಖೈದಿ ಮೇಲೆ ಹಲ್ಲೆ ನಡೆಸಿದ ಘಟನೆ ಹೊಸದುರ್ಗದಲ್ಲಿ ರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಜಿಲ್ಲಾ ಕಾರಾಗೃಹದಲ್ಲಿ ಅಡುಗೆ ಕೆಲಸದಲ್ಲಿ ನಿರತನಾಗಿದ್ದ ಖೈದಿ ಬಿಜು ಎಂಬಾತನ ಮೇಲೆ ಅದೇ ಜೈಲಿನಲ್ಲಿ ಕಳೆಯುತ್ತಿರುವ ಜಿತು ಅಲಿಯಾಸ್ ವೈಷಾಕನ್, ಮೊಹಮ್ಮದ್ ಇಜಾಸ್ ಮತ್ತು ವಿಷ್ಣು ಪ್ರಸಾದ್ ಎಂಬವರು ಸೇರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆ ನಡೆಸುವುದನ್ನು ತಡೆಯಲು ಬಂದ ಜೈಲು ಸಿಬ್ಬಂದಿಗಳಿಗೆ ಈ ಮೂವರು ಬೆದರಿಕೆಯೊಡ್ಡಿದ್ದಾರೆ.
ಜಿಲ್ಲಾಸ್ಪತ್ರೆಯ ಪರಿಸರದಿಂದ ಜೈಲಿನೊಳಗೆ ಖೈದಿಗಳಿಗಾಗಿ ಗಾಂಜಾವನ್ನು ಗೋಡೆ ಮೂಲಕ ಒಳಗೆ ಎಸೆದುಕೊಡುವ ತಂಡವೊಂದು ಕಾರ್ಯ ವೆಸಗುತ್ತಿದೆ. ಸಾಧಾರಣವಾಗಿ ಖೈದಿಗಳು ಸಂಜೆ ಸ್ನಾನದಲ್ಲಿ ತೊಡಗುವ ವೇಳೆ ಹೊರಗಿನಿಂದ ಗೋಡೆ ಮೇಲಿನಿಂದ ಜೈಲಿನೊಳಗೆ ಗಾಂಜಾ ಒಳಗೊಂಡ ಪೊಟ್ಟಣಗಳನ್ನು ಎಸೆದು ಅದನ್ನು ಖೈದಿಗಳಿಗೆ ತಲುಪಿಸಲಾಗುತ್ತಿದೆ. ಇದು ಗಮನಕ್ಕೆ ಬಂದ ಜೈಲು ಸಿಬ್ಬಂದಿಗಳು ಹೀಗೆ ಹೊರಗಿ ನಿಂದ ಎಸೆಯಲ್ಪಟ್ಟ ಗಾಂಜಾ ಗಳನ್ನು ಪತ್ತೆಹಚ್ಚಿ ವಶಪಡಿ ಸಿಕೊಳ್ಳುತ್ತಿರುವುದು ಈ ಜೈಲಿನಲ್ಲಿ ಇತ್ತೀಚೆಗೆ ಸಾಧಾರಣವಾಗ ತೊಡಗಿದೆ. ಹೀಗೆ ಗಾಂಜಾ ಎಸೆಯುತ್ತಿರುವುದರ ಬಗ್ಗೆ ಬಿಜು ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾನೆಂದು ಶಂಕಿಸಿ ಆತನ ಮೇಲೆ ಇತರ ಮೂವರು ಖೈದಿಗಳು ಹಲ್ಲೆ ನಡೆಸಲು ಕಾರಣವೆಂದು ಹೇಳಲಾಗುತ್ತಿದೆ.
ಗಾಯಗೊಂಡ ಬಿಜುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಪ್ರಸ್ತುತ ಜೈಲಿನ ಸುಪರಿನ್‌ಟೆಂ ಡೆಂಟ್ ಕೆ. ವೇಣು ಹೊಸದುರ್ಗ ಪೊಲೀಸರಿಗೆ ನೀಡಿದ ದೂರಿನಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿ ಗಳಲ್ಲೋರ್ವನಾದ ಜಿತುವನ್ನು ಬಳಿಕ ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.