ಜೋಗಿ ಸಮಾಜ ಭವನದ ನೂತನ ಕಟ್ಟಡ ಉದ್ಘಾಟನೆ ನಾಳೆ

ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ನೂತನ ಜೋಗಿ ಸಮಾಜ ಭವನದ ಉದ್ಘಾಟನೆ ನಾಳೆ ಬದಿಯಡ್ಕ ಮೂಕಂಪಾರೆಯಲ್ಲಿ ಜರಗಲಿದೆ. ತಮೋನಿ ಶ್ರೀ ೧೦೦೮ ರಾಜಯೋಗಿ ನಿರ್ಮಲ್‌ನಾಥ್ ಜೀ ಮಹಾರಾಜ್, ಶ್ರೀ ಯೋಗೀಶ್ವರ ಮಠ ಕದ್ರಿ ಮಂಗಳೂರು  ಉದ್ಘಾಟಿಸುವರು. ಶ್ರೀ ೧೦೦೮ ಮಠಾಧೀಶ ಶ್ರೀ ರಾಜಗುರು ಶ್ರದ್ಧಾನಾಥ್ ಜೀ ಮಹಾರಾಜ್  ಶ್ರೀ ಯೋಗೀಶ್ವರ ಮಠ ವಿಟ್ಲ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಭಜನೆ, ರೋಟ್ ಪೂಜೆ, ಜೋಗಿ ಸಮಾಜದ ಪೂರ್ವಾಧ್ಯಕ್ಷರುಗಳಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ, ವಿಕಲಚೇತನ ವಿದ್ಯಾರ್ಥಿಗಳಿಗೆ ಧನಸಹಾಯ, ಸ್ವಯಂಸೇವಕರಿಗೆ ಅಭಿನಂದನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇಂದು ಸಂಜೆ ೬ ಗಂಟೆಯಿಂದ ವಾಸ್ತುಪೂಜೆ ನಡೆಯಲಿದೆ. ನಾಳೆ ಬೆಳಿಗ್ಗೆ ಗಣಪತಿಹೋಮ, ಭಜನೆ, ೧೦ ಗಂಟೆಗೆ ಕದ್ರಿ ಮಠದ ಪ್ರಧಾನ ಅರ್ಚಕ ಉಮೇಶ್ ನಾಥ್ ಇವರಿಂದ ರೋಟ್ ಪೂಜೆ ಆರಂಭವಾಗಲಿದೆ. ೧೦.೧೫ಕ್ಕೆ ಜೋಗಿ ಸಮಾಜ ಸುಧಾರಕ ಸಂಘದ ಕಾಸರಗೋಡು ಅಧ್ಯಕ್ಷ ಗೋಪಾಲ ಕೆ ಮಂಜೇಶ್ವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಬಿ.ಎಸ್. ಭಾಸ್ಕರ, ನಳಿನಾಕ್ಷಿ, ರಾಮಚಂದ್ರ ಬದಿಯಡ್ಕ, ಜಯಂತ ಮಾಸ್ತರ್ ಉಪಸ್ಥಿತರಿರುವರು. ಜೋಗಿ ಸಮಾಜ ಸುಧಾರಕ ಸಂಘದ ಪೂರ್ವಾಧ್ಯಕ್ಷರಾದ ಜನಾದನ ಮಾಸ್ತರ್ ಮುಂಡಿತ್ತಡ್ಕ, ಸಿ.ಎಚ್, ಬಾಬು ಮಾಸ್ತರ್ ಚಂಬಲ್ತಿಮಾರ್, ರಾಮಚಂದ್ರ ಮಾಸ್ತರ್ ಸುಳ್ಯೋಡು, ಐತ್ತಪ್ಪ ಮವ್ವಾರು,  ಮಾಲಿಂಗ ಜೋಗಿ ಸಜಂಕಿ, ಮುರಹರಿ, ವಿ.ಜಿ. ಬೇಳ ಉಪಸ್ಥಿತರಿರುವರು. ಮಧ್ಯಾಹ್ನ ೧೨ ಗಂಟೆಗೆ ಉಭಯ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, ೧೨.೧೫ಕ್ಕೆ ನೂತನ ಜೋಗಿ ಸಮಾಜಭವನದ ಲೋಕಾರ್ಪಣೆ, ಪಾದಕಾಣಿಕೆ, ಸಮಿತಿಯ ವತಿಯಿಂದ ಗೌರವಾರ್ಪಣೆ, ಆಶೀರ್ವಚನ, ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಅಭಿನಂದನಾ ಸಭೆ, ೩ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

Leave a Reply

Your email address will not be published. Required fields are marked *

You cannot copy content of this page