ಜ್ಯುವೆಲ್ಲರಿ ಮಾಲಕ ಬಾವಿಗೆ ಬಿದ್ದು ಮೃತ್ಯು
ಉಪ್ಪಳ: ಜ್ಯುವೆಲ್ಲರಿ ಮಾಲಕ ರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ವಿಶ್ವನಾಥ ಆಚಾರ್ಯ [52] ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ನಿನ್ನೆ ಮಧ್ಯಾಹ್ನ ಮನೆಯ ಬಾವಿಗೆ ಅಕಸ್ಮಾತ್ ಬಿದ್ದಿದ್ದಾರೆ. ಕೂಡಲೇ ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ಊರವರ ಸಹಕಾರದೊಂದಿಗೆ ಇವರನ್ನು ಬಾವಿಯಿಂದ ಮೇಲೆಕ್ಕೆತ್ತಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಚೆರುಗೋಳಿಯಲ್ಲಿ ರುವ ವಿಶ್ವಶ್ರೀ ಜುವೆಲ್ಲರಿಯ ಮಾಲಕರಾಗಿದ್ದಾರೆ. ಕೈಕಂಬದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಅಪ್ರೆöÊಸರ್ರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತನೂ ಆಗಿದ್ದ ಇವರು ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಸಕ್ರೀಯರಾಗಿದ್ದರು. ಭಜನೆ ಸಂಕೀರ್ತನೆಗಾರರಾಗಿದ್ದರೂ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಸದಸ್ಯ, ವಿಶ್ವವಿನಾಯಕ ಸ್ವ-ಸಹಾಯ ಸಂಘದ ಸದಸ್ಯರಾಗಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಿನ್ನೆ ರಾತ್ರಿ ಪುಳಿಕುತ್ತಿ ಸ್ಮಶಾನದಲ್ಲಿ ಅಂತ್ಯಸAಸ್ಕಾರ ನಡೆಯಿತು. ಮೃತರು ಪತ್ನಿ ಶಶಿಕಲಾ, ಪುತ್ರ ಶರತ್, ಸೊಸೆ ರಮ್ಯಾ, ಸಹೋದರಿಯರಾದ ಶಾರದಾ, ಅನಸೂಯ, ಪ್ರೇಮಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಪುರುಷೋತ್ತಮ ಆಚಾರ್ಯ, ತಾಯಿ ವೇದಾವತಿ, ಓರ್ವ ಸಹೋದರ ವಾಸುದೇವ ಈ ಹಿಂದೆ ನಿಧನರಾಗಿದ್ದಾರೆ.