ಜ್ವರ: ಅಧ್ಯಾಪಿಕೆ ಬಲಿ
ಕಾಸರಗೋಡು: ಜ್ವರ ತಗಲಿ ಚಿಕಿತ್ಸೆಯಲ್ಲಿದ್ದ ಅಧ್ಯಾಪಿಕೆ ಸಾವನ್ನಪ್ಪಿದ್ದಾರೆ. ಹೊಸದುರ್ಗ ಮಡಿಕೈ ಕಾರ್ಯಾಕೋಟ್‌ನ ಸುರೇಂದ್ರನ್ ಎಂಬವರ ಪತ್ನಿ ಎಂ. ಮಂಜುಷ (38) ಸಾವನ್ನಪ್ಪಿದ ಯುವತಿ. ಇವರು ಪನಂಗಾಡ್ ಎಲ್.ಪಿ. ಶಾಲೆಯ ತಾತ್ಕಾಲಿಕ ಅಧ್ಯಾಪಿಕೆಯಾಗಿದ್ದರು.
ಜ್ವರ ತಗಲಿದ ಮಂಜುಷರನ್ನು ಮೊದಲು ಹೊಸದುರ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರಾವಸ್ಥೆಗೆ ತಲುಪಿದಾಗ ಅಲ್ಲಿಂದ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದರು.
ನೆಲ್ಲಿಕಾಟ್‌ನ ಮಾಧವನ- ನಾರಾಯಣಿ ದಂಪತಿ ಪುತ್ರಿಯಾಗಿರುವ ಮಂಜುಷಾ, ಪತಿ, ಮಕ್ಕಳಾದ ಅನಾಮಿಕ ಅಮೈ, ಸಹೋದರರಾದ ಮಹೇಶ್, ಮನೋಜ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.