ಟಿಪ್ಪರ್ ಲಾರಿಗೆ ಸಿಲುಕಿದ ವಿದ್ಯುತ್ ಕೇಬಲ್ ಬೈಕ್ ಸವಾರನ ಮೇಲೆ ಬಿದ್ದು ಅಪಘಾತ: ಮದ್ರಸಾ ಅಧ್ಯಾಪಕನಿಗೆ ಗಾಯ

ಸೀತಾಂಗೋಳಿ: ರಸ್ತೆಗೆ ಅಡ್ಡವಾಗಿ ಸ್ಥಾಪಿಸಿದ ವಿದ್ಯುತ್‌ನ ಕೇಬಲ್ ಲಾರಿಯ ಟಾಪ್‌ಗೆ ಸಿಲುಕಿ ತುಂಡಾಗಿ ಸ್ಕೂಟರ್ ಸವಾರನ ಮೇಲೆ ಬಿದ್ದು ಅವರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸೀತಾಂಗೋಳಿಯಲ್ಲಿ ಸಂಭವಿಸಿದೆ. ಕಣ್ಣೂರು ಜಿಲ್ಲೆಯ ನಿವಾಸಿ ಪ್ರಸ್ತುತ ಕನ್ಯಪ್ಪಾಡಿಯಲ್ಲಿ ವಾಸಿಸುವ ಇಬ್ರಾಹಿಂ ಮುಸ್ಲಿಯಾರ್ ಎಂಬವರು ಗಾಯಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಪೇರಾಲ್ ಕಣ್ಣೂರಿನ ಮುಬೀನುಲ್ ಇಸ್ಲಾಂ ಮದ್ರಸಾದ ಅಧ್ಯಾಪಕನಾಗಿದ್ದಾರೆ.

ಇಂದು ಬೆಳಿಗ್ಗೆ ೯.೩೦ರ ವೇಳೆ ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪ ಘಟನೆ ನಡೆದಿದೆ. ಬದಿಯಡ್ಕದಿಂದ ಮಣ್ಣು ಅಗೆಯುವ ಹಿಟಾಚ್ ಯಂತ್ರವನ್ನು ಕುಂಬಳೆಯತ್ತ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಟಾಪ್‌ಗೆ  ರಸ್ತೆಗೆ ಅಡ್ಡವಾಗಿ ಸ್ಥಾಪಿಸಲಾಗಿದ್ದ ವಿದ್ಯುತ್‌ನ ಕೇಬಲ್ ಸಿಲುಕಿದೆ. ಇದರಿಂದ ಕೇಬಲ್ ತುಂಡಾಗಿ ರಸ್ತೆಗೆ ಬಿದ್ದಿದೆ. ಇದೇ ಹೊತ್ತಿನಲ್ಲ್ಲಿ ಆ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ರಾಹಿಂ ಮುಸ್ಲಿಯಾರ್‌ರ ಸ್ಕೂಟರ್‌ಗೆ ಕೇಬಲ್ ಸಿಲುಕಿದೆ. ಇದರಿಂದ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

You cannot copy contents of this page