ಡಾ| ಜನಾರ್ದನ ನಾಯ್ಕ್ರಿಗೆ ಪುರಸ್ಕಾರ
ಕಾಸರಗೋಡು: ಅಸೋಷಿಯೆಶನ್ ಆಫ್ ಫಿಸಿಶಿಯನ್ ಅಫ್ ಇಂಡಿಯಾದ ಕೇರಳ ಘಟಕದಿಂದ ಡಾ. ಎನ್. ಎನ್. ಅಶೋಕನ್ ಸ್ಮಾರಕ ಉಪನ್ಯಾಸ ಪ್ರಶಸ್ತಿಯನ್ನು ಡಾ| ಜನಾರ್ದನ ನಾಯ್ಕ್ ರವರಿಗೆ ಪ್ರದಾನ ಮಾಡಲಾಯಿತು. ಕಾಞಂಗಾಡು ರಾಜ್ ರೆಸಿಡೆನ್ಸಿ ಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ, ರಾಜ್ಯಾಧ್ಯಕ್ಷ ಡಾ| ಅನಿಲ್ ಕುಮಾರ್ ಪ್ರಶಸ್ತಿ ನೀಡಿದರು. ಕಾರ್ಯದರ್ಶಿ ಡಾ| ನೀರಜ್ ಮಾಣೆಕೋತ್, ಡಾ| ಸಜೇಶ್ ಆಶೋಕನ್, ಕಲ್ಲಿಕೋಟೆಯ ವಿಶ್ರಾಂತ ಫ್ರೊ. ಪಿ.ಕೆ ಶಶಿಧರನ್, ಫ್ರೊ. ಸುಮ, ಡಾ| ಕಿಶೋರ್ ಕುಮಾರ್, ಐ ಎಂ ಎ ಯ ಜಿಲ್ಲಾಧ್ಯಕ್ಷೆ ಡಾ| ದೀಪಿಕಾ ಕಿಶೋರ್ ಭಾಗವಹಿಸಿದ್ದರು. ಡಾ| ಜನಾರ್ದನ ನಾಯ್ಕ್ “ವೈದ್ಯಕೀಯ ರಂಗದಲ್ಲಿ ನನ್ನ ಪಯಣ” ಎಂಬ ವಿಷಯದಲ್ಲಿ ಮಾತನಾಡಿದರು.