ಡಿ ನವೀನ್ ಸ್ಟೋರ್ ಮಾಲಕ ನಿಧನ

ಮಂಜೇಶ್ವರ: ಹೊಸಂಗಡಿ ಪೇಟೆಯಲ್ಲಿ ಕಳೆದ 48 ವರ್ಷ ಗಳಿಂದ ವ್ಯಾಪಾರಿಯಾಗಿದ್ದ ನವೀನ್ ಸ್ಟೋರ್ ಮಾಲಕ, ಸಿಪಿಎಂ ಹಿರಿಯ ನೇತಾರ ದುರ್ಗಿಪಳ್ಳ ನಿವಾಸಿ ಕೃಷ್ಣ ಶೆಟ್ಟಿಗಾರ್ [78] ನಿನ್ನೆ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎರಡು ದಿನಗಳ ಹಿಂದೆ ಮನೆ ಯಲ್ಲಿ ಹೃದಯಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಟೇಷನರಿ ಸಾಮಾಗ್ರಿ ಹಾಗೂ ಕಾರವಲ್ ಸಹಿತ ವಿವಿಧ ಪತ್ರಿಕೆಯ ಏಜಂಟ್‌ರಾಗಿದ್ದರು. ಸಮಾಜಸೇ ವಕರೂ ಆಗಿದ್ದಾರೆ. ಹೊಸಂಗಡಿ ರಾಮತ್ತ ಮಜಲ್ ಸಾರ್ವಜನಿಕ ರುದ್ರಭೂಮಿ ಸಮಿತಿಯ ಕಾರ್ಯದರ್ಶಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ವೆಲ್ಪೇರ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಪ್ರೇಮಲತಾ ಟೀಚರ್, ಮಕ್ಕಳಾದ ದಯಾಕರ, ಸುಪ್ರಿಯ, ಸೊಸೆ ಸುಜಾತ, ಅಳಿಯ ಜಗನ್ನಾಥ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಹೊಸಂಗಡಿಯ ಎ.ಕೆ.ಜಿ ಮಂದಿರದಲ್ಲಿ ಸಾರ್ವ ಜನಿಕರ ದರ್ಶನಕ್ಕೆ ಇರಿಸಿ ಅಲ್ಲಿಂದ ಮನೆಗೆ ಕೊಂಡುಹೋಗಿ ಬಳಿಕ ರಾಮತ್ತಮಜಲ್ ರುದ್ರಭೂಮಿ ಯಲ್ಲಿ ಸಂಸ್ಕಾರ ನಡೆಯಿತು.

Leave a Reply

Your email address will not be published. Required fields are marked *

You cannot copy content of this page