ತಂದೆ ನಿಧನಹೊಂದಿದ ಮೂರನೇ ದಿನ ಪುತ್ರನೂ ನಿಧನ
ಕಾಸರಗೋಡು: ತಂದೆ ನಿಧನ ಹೊಂ ದಿದ ಮೂರನೇ ದಿನ ಪುತ್ರನೂ ನಿಧನ ಹೊಂ ದಿದ ಘಟನೆ ನಡೆದಿದೆ.
ಕಾಸರಗೋಡು ಕಸಬಾ ಬೀಚ್ ನಿವಾಸಿ ಬೆಸ್ತ ಕೆ.ಬಾಬು (56) ಎಂಬವರು ಅನಾರೋಗ್ಯದಿಂದ ಮಾರ್ಚ್ 29ರಂದು ನಿಧನಹೊಂ ದಿದ್ದರು. ಅದಾದ ಮೂರನೇ ದಿನ ಅವರ ಹಿರಿಯ ಪುತ್ರ ಬಿ. ಶೈಜು (36) ಕೂಡ ನಿನ್ನೆ ನಿಧನಹೊಂದಿದ್ದಾರೆ. ತಂದೆಯ ಅಗಲುವಿಕೆಯಿಂದ ಶೈಜು ತೀವ್ರ ಆಘಾತಕ್ಕೊಳಗಾಗಿದ್ದರು. ಮಾರ್ಚ್ 31ರಂದು ರಾತ್ರಿ ತೀವ್ರ ವಾಂತಿ ಅನುಭವಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಅವರು ಹೃದಯಾಘಾತಕ್ಕೊ ಳಗಾಗಿ ನಿನ್ನೆ ನಿಧನಹೊಂದಿದರು. ಅವಿವಾಹಿತರಾದ ಶೈಜು ಕೂಡಾ ಮೀನು ಕಾರ್ಮಿಕನಾಗಿದ್ದರು. ಇವರು ತಾಯಿ ಸರೋಜಿನಿ, ಸಹೋದರ-ಸಹೋದರಿಯರಾದ ಬಿ. ವೈಶಾಖ್, ಶೈಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.