ತಂದೆ, ಮಗ ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಮೂವರ ಸೆರೆ
ಕಾಸರಗೋಡು: ಚೆಂಗಳ ನಾಲ್ಕನೇ ಮೈಲ್ನಲ್ಲಿ ಮೊನ್ನೆ ರಾತ್ರಿ ಚೆಂಗಳ ಸಿಟಿಸನ್ ನಗರದ ಇಬ್ರಾಹಿಂ ಸೈನುದ್ದೀನ್ (62) ಅವರ ಪುತ್ರ ಮೊಹಮ್ಮದ್ ಫವಾಸ್ (20) ಮತ್ತು ಅವರ ಸಂಬAಧಿಕರಾದ ಚೆಂಗಳ ತೈವಳಪ್ಪಿನ ರಝಾಕ್ (50), ಸಿಟಿಸನ್ ನಗರದ ಮುನ್ಶೀರ್ ಪಿ.ವಿ. (28) ಎಂಬವರ ಮೇಲೆ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿ ಮೂವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ತೈವಳಪ್ ವಲಿಯಮೂಲೆಯ ಮೊಹಮ್ಮದ್ ಅಸರುದ್ದೀನ್ (29), ಮಿಥಿಲಾಜ್ (29), ಎರುಮಾಳದ ಮೊಯ್ದು (68) ಎಂಬವರು ಬಂಧಿತರಾದ ಆರೋಪಿಗಳು. ಇವರು ಸೇರಿದಂತೆ ಈ ಘಟನೆಗೆ ಸಂಬAಧಿಸಿ ಒಟ್ಟು 10 ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಮುಂದೆ ಪಟಾಕಿ ಸಿಡಿಸಿದುದನ್ನು ಪ್ರಶ್ನಿಸಿದ ದ್ವೇಷದಿಂದ ಮೊನ್ನೆ ರಾತ್ರಿ ತಾನು, ತನ್ನ ಮಗ ಹಾಗೂ ಇತರ ಸಂಬAಧಿಕರಾದ ಇಬ್ಬರ ಮೇಲೆ ಆರೋಪಿಗಳು ಮಾರಕಾಯುಧಗಳೊಂದಿಗೆ ಎರಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಗಾಯಗೊಂಡ ಇಬ್ರಾಹಿಂ ಸೈನುದ್ದೀನ್ ನೀಡಿದ ದೂರಿನಂತೆ ಪೊಲೀರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ