ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ: ಪುತ್ರ ಮೃತ್ಯು
ಕಲ್ಲಿಕೋಟೆ: ಕೆಲಸದ ಸ್ಥಳದಿಂದ ತಾಯಿ ಯನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಹಿಂತಿರುಗುತ್ತಿ ದ್ದಾಗ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪುತ್ರ ಮೃತಪಟ್ಟನು. ಕುಟ್ಯಾಡಿ ನರಿಕ್ಕೂ ಟುಂಚಾಲ್ ನಿವಾಸಿ ಬಾಲನ್ ಎಂಬವರ ಪುತ್ರ ರೋಹಿನ್ (19) ಮೃತಪಟ್ಟ ಯುವಕ. ಮೋಕೇರಿ ಸರಕಾರಿ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾ ಗಿದ್ದಾನೆ. ಶನಿವಾರ ರಾತ್ರಿ 11 ಗಂಟೆಗೆ ಅಪ ಘಾತ ಸಂಭವಿಸಿದೆ. ಖಾಸಗಿ ಟೆಕ್ಸ್‌ಟೈಲ್ ಶೋರೂಂನಲ್ಲಿ ಕೆಲಸ ಮಾಡುವ ತಾಯಿ ಯನ್ನು ಕರೆದುಕೊಂಡು ಬರುತ್ತಿರುವಾಗ ನರಿಕ್ಕೋಟುಂಚಾಲ್‌ನಲ್ಲಿ ಬೈಕ್‌ಗೆ ನಿಯಂತ್ರಣ ತಪ್ಪಿದ ಕಾರು ಢಿಕ್ಕಿ ಹೊಡೆದಿದೆ.