ತಾಯಿಯ ನಿಧನದ ವೇದನೆ: ಪುತ್ರ ಆತ್ಮಹತ್ಯೆ
ಕಾಸರಗೋಡು: ತಾಯಿ ಮೃತಪಟ್ಟ ಮನೋವೇದನೆಯಿಂದ ಪುತ್ರ ಆತ್ಮಹತ್ಯೆಗೈದ ಘಟನೆ ವೆಳ್ಳರಿಕುಂಡ್ ಪರಪ್ಪ ಪಯ್ಯಾಳಂ ಉಪ್ಪಾಟಿಮೂಲೆಯಲ್ಲಿ ಸಂಭವಿಸಿದೆ. ಇಲ್ಲಿನ ರಾಜೇಶ್ (20) ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಯುವಕ. ಇಂದು ಮುಂಜಾನೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿ ದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಕುಂಬ (ಮೀನಾಕ್ಷಿ) ಇವನನ್ನು ಸಾಕಿದ್ದರು. ತಾಯಿ ಕೂಡಾ ಆರು ತಿಂಗಳ ಹಿಂದೆ ನಿಧನ ಹೊಂದಿದರು. ಸಹೋದರರು ಯಾರೂ ಇಲ್ಲದ ರಾಜೇಶಗೆ ತಾಯಿಯ ನಿಧನ ದೊಡ್ಡ ಆಘಾತ ಸೃಷ್ಟಿಸಿತು. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆಗೈದಿರಬೇಕೆಂದು ಹೇಳಲಾಗುತ್ತಿದೆ.