ತಾಯಿ ಜೊತೆ ನಿದ್ರಿಸಿದ್ದ 51ದಿನದ ಮಗು ಮೃತ್ಯು
ಕಾಸರಗೋಡು: ತಾಯಿ ಜೊತೆ ನಿದ್ರಿಸಿದ್ದ 51 ದಿನ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಮಧೂರು ಜುಮಾ ಮಸೀದಿ ಬಳಿಯ ಕಲ್ಲಕಟ್ಟ ಹೌಸ್‌ನ ಕಬೀರ್- ಸಫೀರ ನಸ್ನಿ ದಂಪತಿಯ ಗಂಡು ಮಗು ಸಾವಿಗೀಡಾಗಿದೆ. ಕಳೆದ ದಿನ ರಾತ್ರಿ ಹಾಲು ನೀಡಿ ಮಗುವನ್ನು ಮಲಗಿಸಲಾಗಿತ್ತು. ಬೆಳಿಗ್ಗೆ ವೇಳೆ ಮಗು ಮೃತಪಟ್ಟ ಸ್ಥಿತಿಯಲ್ಲ್ಲಿ ಕಂಡು ಬಂದಿದೆ. ಘಟನೆ ಬಗ್ಗೆ ಸಫೀರ ನಸ್ನಿಯ ತಂದೆ ಅಬ್ದುಲ್ ರಹ್ಮಾನ್ ಫೈಸಲ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಅಪೂರ್ವ ಸಂದರ್ಭಗಳಲ್ಲಿ ಈ ರೀತಿ ಸಾವು ಸಂಭವಿಸುವುದಿದೆಯೆಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.