ತಿರುವನಂತಪುರದಲ್ಲಿ ಕಾಲರಾ ಪತ್ತೆ
ತಿರುವನಂತಪುರ: ತಿರುವ ನಂತಪು ರದಲ್ಲಿ ಮಾರಕ ರೋಗ ವಾದ ಕಾಲರಾ ದೃಢೀಕರಿಸ ಲಾಗಿದೆ. ತಿರುವನಂತಪುರ ನೈಯ್ಯಾಟಿಂಗರದ ಕಾರುಣ್ಯ ವಿಕಲ ಚೇತನರ ಹಾಸ್ಟೆಲ್‌ನಲ್ಲಿ ವಾಸಿಸುವ 10ರ ಹರೆಯದ ಬಾಲಕನಿಗೆ ಕಾಲರ ಬಾಧಿಸಿರು ವುದು ಪತ್ತೆಹಚ್ಚಲಾಗಿದೆ. ಇತ್ತೀಚೆಗೆ ಅಸೌಖ್ಯವಾಧಿಸಿ ಹಾಸ್ಟೆಲ್‌ನ 26ರ ಹರೆಯದ ಓರ್ವ ಮೃತಪಟ್ಟಿದ್ದನು. ಆದರೆ ಆತನಿಗೆ ಕಾಲರ ಬಾಧಿಸಿರುವುದು ಪತ್ತೆಹಚ್ಚಲಾಗಲಿಲ್ಲ.
ಇದೇ ವೇಳೆ 10ರ ಹರೆ ಯದ ಬಾಲಕನಿಗೆ ಕಾಲರ ಬಾಧಿಸಿರುವುದು ದೃಢೀಕರಿಸಿದ ಹಿನ್ನೆಲೆಯಲ್ಲಿ ಅದರ ಮೂಲ ಪತ್ತೆಹಚ್ಚಲಿರುವ ಕ್ರಮಗಳನ್ನು ಆರೋಗ್ಯ ಇಲಾಖೆ ಆರಂಭಿಸಿದೆ. ಕಾರುಣ್ಯ ಹಾಸ್ಟೆಲ್‌ನ 10 ಮಂದಿ ರೋಗ ಲಕ್ಷಣಗಳೊಂದಿಗೆ ಚಿಕಿತ್ಸೆ ಯಲ್ಲಿದ್ದಾರೆ. ಅವರ ರಕ್ತ ಸ್ಯಾಂಪಲ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ರಾಜ್ಯದಲ್ಲಿ ಕಳೆದ ಆರು ತಿಂಗಳೊ ಳಗೆ ಒಂಭತ್ತು ಮಂದಿಗೆ ಕಾಲರ ದೃಢೀಕರಿಸಲಾಗಿದೆ. 2017ರಲ್ಲಿ ಕೊನೆಯದಾಗಿ ಕಾಲರಾ ಬಾಧಿಸಿ ರಾಜ್ಯದಲ್ಲಿ ಸಾವು ಸಂಭವಿಸಿತ್ತು.