ತಿರುವನಂತಪುರದ ಸಹಕಾರಿ ಬ್ಯಾಂಕ್‌ಗೂ ಇ.ಡಿ ದಾಳಿ
ತಿರುವನಂತಪುರ: ಕರುವ ನ್ನೂರು ಸಹಕಾರಿ ಬ್ಯಾಂಕ್‌ಗೆ ನಡೆದ ದಾಳಿಯ ಬೆನ್ನಲ್ಲೇ ತಿರುವನಂತ ಪುರದ ಸಹಕಾರಿ ಬ್ಯಾಂಕ್‌ಗೂ ಇ.ಡಿ ದಾಳಿ ನಡೆಸಿ ತಪಾಸಣೆಗೈದಿದೆ. ಕಂಡಲ ಸಹಕಾರಿ ಬ್ಯಾಂಕ್‌ಗೆ ಇಡಿ ದಾಳಿ ನಡೆಸಿದೆ. ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಗಳಾದ ಶಾಂತ ಕುಮಾರಿ, ರಾಜೇಂದ್ರನ್, ಮೋಹನ ಚಂದ್ರನ್ ಎಂಬಿವರ ಹಾಗೂ ಕಲೆ ಕ್ಷನ್ ಏಜೆಂಟ್ ಅನು ಎಂಬಿವರ ಮನೆಗಳಿಗೂ ಇ.ಡಿ ದಾಳಿ ನಡೆಸಿ ತಪಾಸಣೆಗೈದಿದೆ. ಇಂದು ಮುಂಜಾನೆ ೫.೩೦ಗಂಟೆಗೆ ಎರ್ನಾಕುಳಂನಿಂದ ತಲುಪಿದ ಇಡಿ ಅಧಿಕಾರಿಗಳು ಭಾರೀ ಭದ್ರತಾ ಕ್ರಮಗಳೊಂದಿಗೆ ದಾಳಿ ಆರಂಭಿಸಿದ್ದಾರೆ. ಬ್ಯಾಂಕ್‌ನ ಆಡಳಿತ ಸಮಿತಿ ಅಧ್ಯಕ್ಷರ ಮನೆ ಯಲ್ಲೂ ತಪಾಸಣೆ ನಡೆಯುತ್ತಿದೆ.