ತಿರುವೋಣಂ ಬಂಪರ್ ೨೫ಕೋಟಿ ರೂ. ಕೊಯಂಬತ್ತೂರು ನಿವಾಸಿಗೆ

ಪಾಲಕ್ಕಾಡ್: ರಾಜ್ಯ ಸರಕಾರದ ತಿರುವೋಣಂ ಬಂಪರ್‌ನ ಪ್ರಥಮ ಬಹು ಮಾನವಾದ ೨೫ ಕೋಟಿ ರೂಪಾಯಿ ತಮಿಳುನಾಡಿನ ಕೊಯಂಬತ್ತೂರು ನಿವಾಸಿಗೆ ಲಭಿಸಿದೆ. ಕೊಯಂಬತ್ತೂರು ಅನ್ನೂರು ನಿವಾಸಿಯಾದ ನಟರಾಜನ್ ಎಂಬವರಿಗೆ ಈ ಅದೃಷ್ಟ ಒಲಿದಿದೆ. ಪಾಲಕ್ಕಾಡ್‌ನಿಂದ ಇವರು ೧೦ ಟಿಕೆಟ್‌ಗಳನ್ನು ಪಡೆದಿದ್ದಾರೆ. ಅವುಗಳ ಪೈಕಿ ಒಂದಕ್ಕೆ ಪ್ರಥಮ ಬಹುಮಾನ ಬಂದಿದೆ.

ಈ ಬಾರಿಯ ತಿರುವೋಣಂ ಬಂಪರ್ ಟಿಕೆಟ್ ಮಾರಾಟದಲ್ಲಿ ಸಾರ್ವಜನಿಕ ದಾಖಲೆ ಸೃಷ್ಟಿಯಾಗಿದೆ. ಒಟ್ಟು ೭೫,೬೫,೦೦೦ ಟಿಕೆಟ್‌ಗಳು ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ೯ ಲಕ್ಷ ಟಿಕೆಟ್‌ಗಳ ಹೆಚ್ಚು ಮಾರಾಟವಾಗಿದೆ.

Leave a Reply

Your email address will not be published. Required fields are marked *

You cannot copy content of this page