ತುಳುನಾಡಿನ ಮತಸೌಹಾರ್ದ ಪುರಸ್ಕಾರಕ್ಕೆ ಜೆ.ಎಸ್. ಸೋಮಶೇಖರ ಆಯ್ಕೆ
ಕಾಸರಗೋಡು: ದುಬಾಯಿ ಕೆ.ಎಂ. ಸಿ.ಸಿ. ಎಣ್ಮಕಜೆ ಪಂಚಾಯತ್ ಸಮಿತಿಯ ತುಳುನಾಡು ಮತಸೌಹಾರ್ದ ಪುರಸ್ಕಾರ ಘೋಷಿಸಲಾಗಿದೆ. ಮಾಜಿ ಸಚಿವ, ದೀರ್ಘಕಾಲ ಮಂಜೇಶ್ವರ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲರ ಹೆಸರಿನಲ್ಲಿ ತುಳುನಾಡಿನ ಮತಸೌಹಾರ್ದ ಪುರಸ್ಕಾರಕ್ಕೆ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಆಯ್ಕೆಯಾಗಿದ್ದಾರೆ.
ನಾಡಿನಲ್ಲಿ ಮತಸೌಹಾರ್ದತೆ ಆಶಯಗಳನ್ನು ಎತ್ತಿ ಹಿಡಿಯಲು, ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸಲು ಅವರು ನೀಡಿದ ನಾಯಕತ್ವ ಕೊಡುಗೆಯನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಪಂಚಾಯತ್ ಆಡಳಿತದಲ್ಲಿ ಕ್ರಿಯಾತ್ಮಕವಾದ ನಿಲುವು, ಸಹಕಾರ, ಶಿಕ್ಷಣ, ಸಾಮಾಜಿಕ ಸೇವಾರಂಗದಲ್ಲಿ ಗಮನಾರ್ಹವಾದ ಚಟುವಟಿಕೆಗಳನ್ನು ಅವರು ನಡೆಸುತ್ತಿರುವುದಾಗಿ ಆಯ್ಕೆ ಸಮಿತಿ ಕಂಡುಕೊಂಡಿದೆ.
ಮುಸ್ಲಿಂಲೀಗ್ ಎಣ್ಮಕಜೆ ಪಂ. ಸಮಿತಿ ಅಧ್ಯಕ್ಷ ಎ.ಕೆ. ಶರೀಫ್, ಉದ್ಯಮಿ ಅಬ್ದುಲ್ಲ, ಸುಧೀರ್ ಕುಮಾರ್ ಶೆಟ್ಟಿ, ಮುಹಮ್ಮದಾಲಿ ಪೆರ್ಲ, ಅಬೂಬಕರ್ ಹಾಜಿ ಪೆರ್ಣೆ ಮೊದಲಾದವರು ಸೇರಿದ ಸಮಿತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ದ. ೯ರಂದು ದುಬಾಯಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ದುಬಾಯಿ ಕೆ.ಎಂ.ಸಿ.ಸಿ. ಎಣ್ಮಕಜೆ ಪಂ. ಸಮಿತಿ ಅಧ್ಯಕ್ಷ ಎಸ್.ಯು. ಅಶ್ರಫ್ ಶೇಣಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಲ್ಕ ಮಾತನಾಡಿದರು. ಮುಷ್ತಾಕ್ ಬಜಕೂಡ್ಲು, ತನ್ವೀರ್ ಪೆರ್ಲ, ಹಸನ್, ಮನ್ಸೂರ್, ಯೂಸಫ್ ಉಪಸ್ಥಿತರಿದ್ದರು.