ತೃಶೂರಿನಲ್ಲಿ ಮೂವರು ಬಾಂಗ್ಲಾದೇಶ ಪ್ರಜೆಗಳ ಬಂಧನ
ತೃಶೂರು: ತೃಶೂರಿನಲ್ಲಿ ಅನಧಿ ಕೃತವಾಗಿ ವಾಸಿಸುತ್ತಿದ್ದ ಮೂವರು ಬಾಂಗ್ಲಾದೇಶ ಪ್ರಜೆಗಳನ್ನು ಪೊಲೀ ಸರು ಬಂಧಿಸಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅಂದಿಕ್ಕಾಡ್ ಪೊಲೀಸರು ಚೆಮ್ಮಾಪಿಳ್ಳಿ ಎಂಬಲ್ಲಿ ಇಂದು ಮುಂಜಾನೆ ನಡೆಸಿದ ತಪಾ ಸಣೆ ವೇಳೆ ಇವರನ್ನು ಪತ್ತೆಹಚ್ಚಲಾಗಿದೆ. ಇವರ ಜೊತೆಗಿದ್ದ ಮತ್ತಿಬ್ಬರು ಓಡಿ ಪರಾರಿಯಾಗಿದ್ದಾರೆ. ಬಂಧಿತರು ಚೆಮ್ಮಾಪಿಳ್ಳಿಯ ಗುಜರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.