ತ್ಯಾಜ್ಯ ಉಪೇಕ್ಷೆ: ಕುಂಬಳೆ ಪಂ.ಗೆ ೧೦,೦೦೦ ರೂ. ದಂಡ
ಕುಂಬಳೆ: ಪಂಚಾಯತ್ನ ತ್ಯಾಜ್ಯ ಸಂಗ್ರಹ ಕೇಂದ್ರವಾದ ಎಂಸಿಎಫ್ನ ಹೊರಗೆ ನಿರ್ಲಕ್ಷ್ಯವಾಗಿ ತ್ಯಾಜ್ಯವನ್ನು ರಾಶಿ ಹಾಕಿರುವುದಕ್ಕೆ ಸಂಬಂಧಿಸಿ ಕುಂಬಳೆ ಪಂಚಾಯತ್ಗೆ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ೧೦,೦೦೦ ರೂ. ದಂಡ ವಿಧಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪೇಕ್ಷಿಸಿದ ಬಗ್ಗೆ ಕುಂಬಳೆಯ ಮುಹಮ್ಮದ್ ರಿಫಾಯಿ ಎಂಬವರ ಮಾಲಕತ್ವದ ಕಟ್ಟಡಕ್ಕೊ, ಬಿ.ಎಸ್. ಅಬ್ದುಲ್ ರಜಾಕ್ ಎಂಬವರ ಬಾಡಿಗೆ ಕ್ವಾರ್ಟರ್ಸ್ಗೂ, ಆಯಿಷಾ ಬಿ ಎಂಬವರ ಬಾಡಿಕೆ ಕಟ್ಟಡಕ್ಕೂ, ಪರಿಸರ ಶುಚೀಕರಿಸದ ಹಿನ್ನೆಲೆಯಲ್ಲಿ ಎಂ. ಪ್ರಶಾಂತ್ ಎಂಬವರಿಗೂ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ದಂಡ ಹೇರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಕುಂಬಳೆ ಪಂಚಾಯತ್ ಗೆ ನಿರ್ದೇಶ ನೀಡಲಾಗಿದೆ. ಪಿ.ವಿ. ಶಾಜಿ, ಎಂ.ಟಿ.ಪಿ. ರಿಯಾಸ್, ಇ.ಕೆ. ಫಾಸಿಲ್, ಪಿ.ವಿ. ಸೌಮ್ಯ ತಂಡದಲ್ಲಿದ್ದರು.