ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಂಡ ನಯಾಬಜಾರ್ ಒಳರಸ್ತೆ: ದುರ್ವಾಸನೆಯಿಂದ ಸ್ಥಳೀಯರಿಗೆ ಸಮಸ್ಯೆ

ಉಪ್ಪಳ:  ತ್ಯಾಜ್ಯ ಸಂಗ್ರಹ ಕೇಂದ್ರ ವಾಗಿ ಮಾರ್ಪಾಡುಗೊಂಡ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ನಯಾ ಬಜಾರ್-ಸೋಂಕಾಲು ಲೋಕೋಪ ಯೋಗಿ ರಸ್ತೆಯಲ್ಲಿ ಸಂಚಾರ ದುಸ್ತರ ವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ರೋಷಗೊಂಡಿದ್ದಾರೆ. ಈ ರಸ್ತೆಯ ಕುದುಕೋಟಿ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ತುಂಬಿಕೊಂಡು ದುರ್ವಾಸನೆ ಹರಡಿ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ.  ಸುಮಾರು ೧ ವರ್ಷದಿಂದ ಇಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಕಾಲು, ಪ್ರತಾಪನಗರ, ಚೆರುಗೋಳಿ ಮೊದಲಾದ ಪ್ರದೇಶಗಳಿಗೆ ತೆರಳುವವರು ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ದುರ್ವಾಸನೆ ಅಸಹನೀಯವಾಗಿದೆ.  ರಾತ್ರಿ ಹೊತ್ತಿನಲ್ಲಿ ದೂರದ ಕಡೆಗಳಿಂದ ವಾಹನಗಳ ಮೂಲಕ  ತ್ಯಾಜ್ಯವನ್ನು ತಂದು ಇಲ್ಲಿ ರಸ್ತೆಬದಿ ಯಲ್ಲೇ ಎಸೆದು ಪರಾರಿಯಾಗುತ್ತಿ ರುವುದಾಗಿ ಸ್ಥಳೀಯರು ದೂರಿದ್ದಾರೆ. ಈ ಪರಿಸರದಲ್ಲಿ ಪೊದೆ ತುಂಬಿ ಕೊಂಡು ಕಾಡು ಪ್ರಾಣಿಗಳ ಸಹಿತ ವಿಷ ಜಂತುಗಳು ತುಂಬಿಕೊಂಡಿರುವು ದಾಗಿ ಸ್ಥಳೀಯರು ದೂರುತ್ತಾರೆ. ಈ ಪರಿಸರದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ರಾಶಿ ಬಿದ್ದಿರುವ ತ್ಯಾಜ್ಯವನ್ನು, ಹರಡಿಕೊಂ ಡಿರುವ ಪೊದೆಗಳನ್ನು ತೆರವುಗೊಳಿ ಸಲು ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page