ದಲ್ಲಾಳಿಗಳ ಬಗ್ಗೆ ಇ.ಪಿ. ಹೆಚ್ಚು ಜಾಗ್ರತೆ ಪಾಲಿಸುತ್ತಿಲ್ಲ‘ಪಾಪಿಯ ಜತೆ ಶಿವ ನಿಂತರೂ ಶಿವನೂ ಪಾಪಿಯಾಗುತ್ತಾನೆ’- ಮುಖ್ಯಮಂತ್ರಿ

ಕಣ್ಣೂರು: ದಲ್ಲಾಳಿಯಾಗಿ ಕಾರ್ಯವೆಸಗುತ್ತಿರುವ ನಂದಕುಮಾರ್‌ನಂತಹ ವ್ಯಕ್ತಿಗಳ ಜತೆ ಸಿಪಿಎಂ ನೇತಾರ ಇ.ಪಿ. ಜಯರಾಜನ್‌ರ ನಂಟು ನಡೆಸಿದ ಕ್ರಮಕ್ಕೆ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಪಿ ಜತೆ ನಿಂತಲ್ಲಿ ಸಾಕ್ಷಾತ್ ಶಿವನೂ ಪಾಪಿಯಾಗಲಿದ್ದಾನೆ. ನಂದಕುಮಾರ್‌ರಂತಹ ದಲ್ಲಾಳಿ ಜತೆ ನಂಟು ಬೆಳೆಸುವ ವಿಷಯದಲ್ಲಿ ಇ.ಪಿ. ಜಯರಾಜನ್ ಅವರು ಸರಿಯಾದ ರೀತಿಯಲ್ಲಿ ಜಾಗ್ರತೆ ಪಾಲಿಸಿರಲಿಲ್ಲ. ನಂದಕುಮಾರ್‌ರಂತಹ ವ್ಯಕ್ತಿಯೊಂದಿಗೆ ಯಾರೂ ನಂಟು ಬೆಳೆಸಬಾರದು ಮಾತ್ರವಲ್ಲ ಪರಿಚಯವನ್ನು ಪಡಬಾರದೆಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

ಇ.ಪಿ. ಜಯರಾಜನ್ ಸಿಪಿಎಂನ ಕೇಂದ್ರ ಸಮಿತಿ ಸದಸ್ಯರು ಮಾತ್ರವಲ್ಲ ಎಡರಂಗದ ರಾಜ್ಯ ಸಂಚಾಲಕರೂ ಆಗಿದ್ದಾರೆ. ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಬೇಕಾಗಿ ಬಂದಿತ್ತು.

ಸಮರ್ಥವಾಗಿ ಮೆಟ್ಟಿ ನಿಂತು ಅದನ್ನೆಲ್ಲಾ ಗೆದ್ದು ಮುಂದೆ ಬಂದಿರುವ ಇ.ಪಿ. ಜಯರಾಜನ್ ಬಿಜೆಪಿ ಸೇರುವ ಬಗ್ಗೆ ಚಿಂತನೆ ನಡೆಸಿದರೆಂಬ ರೀತಿಯ ಸುದ್ದಿಯಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಅದು ಜನರಿಗೂ ಚೆನ್ನಾಗಿಯೇ ಅರಿವಿದೆ. ಇ.ಪಿ. ಜಯರಾಜನ್ ಎಲ್ಲ  ಸೌಹಾರ್ದ ಯುತವಾಗಿ ಹಾಗೂ ಉತ್ತಮ ಸಂಬಂಧ ಹೊಂದಿರುವ ರಾಜಕೀಯ ನೇತಾರರಾಗಿದ್ದಾರೆ. ಅದಕ್ಕೆ ವಿಪಕ್ಷಗಳು ತಪ್ಪು ಚಿತ್ರೀಕರಣ ನೀಡುತ್ತಿದ್ದಾರೆಂದು ಮುಖ್ಯಮಂತ್ರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page